ಬಂಟ್ವಾಳ | ರಸ್ತೆ ಅಪಘಾತ: ಮನೆಗೆ ಹಾನಿ

Prasthutha|

ಬಂಟ್ವಾಳ: ಕಾರು ಹಾಗೂ
ಪಿಕ್‌ ಅಪ್‌ ವಾಹನ ನಡುವೆ ಅಪಘಾತ ಸಂಭವಿಸಿ ಪಿಕ್‌ ಅಪ್‌ ಹೆದ್ದಾರಿ ಬದಿಯ ಮನೆಗೆ ಢಿಕ್ಕಿ ಹೊಡೆದು ಮನೆಗೆ ಹಾನಿಯಾದ ಘಟನೆ ಬಂಟ್ವಾಳ ಸಮೀಪದ ಚಂಡ್ತಿಮಾರಿನಲ್ಲಿ ನಡೆದಿದೆ.

- Advertisement -

ಕಾರು ಪುಂಜಾಲಕಟ್ಟೆ ಭಾಗದಿಂದ ಆಗಮಿಸಿದ್ದು, ಪಿಕ್‌ ಅಪ್‌ ಬಂಟ್ವಾಳ ಭಾಗದಿಂದ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಮನೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ವಾಹನಗಳು ಜಖಂಗೊಂಡಿವೆ.

- Advertisement -