Home ಟಾಪ್ ಸುದ್ದಿಗಳು ಬಂಟ್ವಾಳ | ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ: ತಪ್ಪಿಸಲೆತ್ನಿಸಿದ ಲಾರಿ ಚಾಲಕನನ್ನು...

ಬಂಟ್ವಾಳ | ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ: ತಪ್ಪಿಸಲೆತ್ನಿಸಿದ ಲಾರಿ ಚಾಲಕನನ್ನು ಬೆನ್ನಟ್ಟಿದ ಸ್ಥಳೀಯರು

ಬಂಟ್ವಾಳ: ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ನಡುವೆ ಬುಡೋಳಿಯ ಬೊಳ್ಳುಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.

ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸುಮಾರು 5 ಕಿ.ಮೀ ದೂರದಲ್ಲಿ ಲಾರಿಯನ್ನು ಬೆನ್ನಟ್ಟಿದ ಯುವಕರ ತಂಡ ತಡೆದು ನಿಲ್ಲಿಸಿ, ಲಾರಿ ಚಾಲಕನಿಗೆ ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Join Whatsapp
Exit mobile version