PFI, ಕ್ಯಾಂಪಸ್ ಫ್ರಂಟ್ ನಿಷೇಧ: ಬಂಧಿತ ನಾಯಕರಿಗೆ ಜಾಮೀನು

ಕೊಪ್ಪಳ: NIA ದಾಳಿಯ ಬೆನ್ನಲ್ಲೇ ಬಂಧನಕ್ಕೊಳಗಾಗಿ ಎರಡು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ನಿಷೇಧಿತ PFI ನ ಇಬ್ಬರು ಮತ್ತು ಕ್ಯಾಂಪಸ್ ಫ್ರಂಟ್’ನ ಒಬ್ಬ ನಾಯಕರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡ ರಸೂದ್ ಮುಹಮ್ಮದ್,ಸಲೀಂ ಖಾದ್ರಿ ಮತ್ತು ಕ್ಯಾಂಪಸ್ ಫ್ರಂಟ್’ನ ಕಾರ್ಯದರ್ಶಿ ಸೈಯ್ಯದ್ ಸರ್ಫರಾಝ್ ಹುಸೇನ್ ಎಂಬವವರನ್ನು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ ಬಳಿಕ ನ್ಯಾಯಮೂರ್ತಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

- Advertisement -

ಈ ಮಧ್ಯೆ ಎರಡೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ನಾಯಕರು ಪರಸ್ಪರ ಭೇಟಿಯಾಗುತ್ತಿದ್ದು, ಬಂಧನದ ವೇಳೆ ಆರೋಪಿಗಳ ಬಳಿ ಯಾವುದೇ ಅಪಾಯಕಾರಿ ಸಾಮಾಗ್ರಿಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಎಸ್ಪಿ ಅರುಣಾಂಗ್ಶು ಗಿರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.