ಖಾಸಗೀಕರಣಕ್ಕೆ ನಾಲ್ಕು ಬ್ಯಾಂಕ್ ಗಳು ಆಯ್ಕೆ । ಲಕ್ಷಾಂತರ ನಿರುದ್ಯೋಗ ಸೃಷ್ಟಿಯ ಭೀತಿ

Prasthutha|

ಸರಕಾರಿ ಒಡೆತನದ ನಾಲ್ಕು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಚಿಂತಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾಸಗೀಕರಣಗೊಳ್ಳಲು ಆಯ್ಕೆಯಾದ ಬ್ಯಾಂಕ್ ಗಳ ಪಟ್ಟಿಯಲ್ಲಿವೆ ಎಂದು ತಿಳಿದುಬಂದಿದೆ. ಈ ಪೈಕಿ ಎರಡು ಬ್ಯಾಂಕ್‌ ಗಳನ್ನು 2021-22ನೇ ಹಣಕಾಸು ವರ್ಷಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಎನ್ ಡಿಟಿವಿ’ ವರದಿ ತಿಳಿಸಿದೆ.

ಈ ರೀತಿ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವುದರಿಂದ, ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿದೆ. ಸರಕಾರಿ ಒಡೆತನದ ಸಂಸ್ಥೆಗಳು ಖಾಸಗೀಕರಣಗೊಳ್ಳುವುದರಿಂದ, ಖಾಸಗಿ ಸಂಸ್ಥೆಗಳು ವೆಚ್ಚ ನಿಯಂತ್ರಣದ ನೆಪದಲ್ಲಿ ಉದ್ಯೋಗ ಕಡಿತ ಮಾಡುತ್ತವೆ.

- Advertisement -

ಅಲ್ಲದೆ, ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀತಿ ಅನ್ವಯವಾಗುವುದಿಲ್ಲವಾದ ಕಾರಣ, ಮೀಸಲಾತಿಯ ಆಧಾರದಲ್ಲಿ ಬ್ಯಾಂಕ್ ಉದ್ಯೋಗ ಪಡೆಯುತ್ತಿದ್ದ ಎಸ್.ಸಿ./ಎಸ್.ಟಿ., ಇತರ ಹಿಂದುಳಿದ ಜಾತಿಗಳ ಪ್ರತಿಭಾವಂತರಿಗೆ ಲಕ್ಷಾಂತರ ಸಂಖ್ಯೆಯ ಉದ್ಯೋಗ ನಷ್ಟವಾಗುವುದು ಖಚಿತ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೊದಲ ಹಂತದ ಪರೀಕ್ಷಾರ್ಥವಾಗಿ ಮಧ್ಯಮ ಹಾಗೂ ಸಣ್ಣ ಗಾತ್ರದ ಬ್ಯಾಂಕ್‌ ಗಳನ್ನು ಈ ವರ್ಷ ಮಾರಾಟ ಮಾಡಲು ಮುಂದಾಗಿದೆ. ಮುಂಬರುವ ವರ್ಷಗಳಲ್ಲಿ ದೇಶದ ದೊಡ್ಡ ಬ್ಯಾಂಕ್‌ ಗಳನ್ನೂ ಖಾಸಗೀರಣಗೊಳಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಮುಂಬರುವ ಹಣಕಾಸು ವರ್ಷದಲ್ಲಿ ನಾಲ್ಕು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಬೇಕೆಂದು ಪಿಎಂ ಮೋದಿಯವರ ಕಚೇರಿ ಆರಂಭದಲ್ಲಿ ಬಯಸಿತ್ತು, ಆದರೆ ನೌಕರರನ್ನು ಪ್ರತಿನಿಧಿಸುವ ಒಕ್ಕೂಟಗಳ ಪ್ರತಿರೋಧದ ಕುರಿತಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

Join Whatsapp
Exit mobile version