ನಮ್ಮ ಕಣ್ಣೀರು ಕಾಣಲಾಗದ ಇವರೆಂತಹಾ ಪ್ರಧಾನಿ? ಚಪ್ಪಾಳೆ-ತಟ್ಟೆ ಬಾರಿಸಿ ಬೀದಿಗಿಳಿದು ಪ್ರಶ್ನಿಸಿದ PMC ಬ್ಯಾಂಕ್ ಖಾತೆದಾರರು

Prasthutha: September 5, 2020

ದೇಶದಲ್ಲಿ ಕೊರೋನ ವೈರಸ್ ನಿಂದಾಗಿ ಪರಿಸ್ಥಿತಿ ಬಹಳಷ್ಟು ಬಿಗಡಾಯಿಸಿದೆ. ಈ ಮಹಾಮಾರಿಯ ಕಾರಣದಿಂದಾಗಿ ಬಹಳಷ್ಟು ಮಂದಿಯ ಜೀವವೂ ಹೋಗಿದೆ. ಅದೇ ವೇಳೆ ಸರಕಾರವು ಹೇರಿದ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಕೆಲಸವನ್ನೂ ಕಳೆದುಕೊಂಡಿದ್ದಾರೆ.

ಇಂಥದ್ದರಲ್ಲಿ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಬ್ಯಾಂಕ್ ಗೆ ಸಂಬಂಧಿಸಿ ನಡೆಯುತ್ತಿರುವ ವಿವಾದಕ್ಕಾಗಿ ಇದೀಗ ಜನರು ಬೀದಿಗಿಳಿದು ಪ್ರತಿಭಟಿಸ ತೊಡಗಿದ್ದಾರೆ. ಮುಂಬೈಯಲ್ಲಿ PMC ಬ್ಯಾಂಕ್ ನ ಖಾತೆದಾರರು ಜೊತೆಗೂಡಿ ಸರಕಾರದ ವಿರುದ್ಧ ಧರಣಿಯನ್ನು ನಡೆಸಿದರು.

ವಾಸ್ತವದಲ್ಲಿ ಪಿಎಂಸಿ ಬ್ಯಾಂಕಿನ 9 ಲಕ್ಷ ಖಾತೆದಾರರ ಹಣ ಸಿಲುಕಿಕೊಂಡಿದೆ. ಮೋದಿ ಸರಕಾರವು ಈ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಂದೆಡೆ ಜನರು ಕೊರೋನದ ಗಂಭೀರ ಸಂಕಷ್ಟದೊಂದಿಗೆ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಜನರಿಗೆ ತಮ್ಮದೇ ಉಳಿತಾಯದ ಹಣವನ್ನು ಹಿಂಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಳೆದ 11 ತಿಂಗಳುಗಳಿಂದ ಜನರ ಹಣ ಪಿಎಂಸಿ ಬ್ಯಾಂಕಿನಲ್ಲಿ ಸಿಲುಕಿಕೊಂಡಿದೆ. ಇಂದು ಜನರು ಮುಂಬೈಯಲ್ಲಿ ಆರ್.ಬಿ.ಐ ಕಚೇರಿಯ ಮುಂದೆ ಚಪ್ಪಾಳೆ-ತಟ್ಟೆ ಬಾರಿಸುತ್ತಾ ಪ್ರತಿಭಟನೆ ನಡೆಸಿದರು ಮತ್ತು ತಮ್ಮ ಹಣ ಯಾವಾಗ ತಮಗೆ ಸಿಗಲಿದೆ ಎಂದು ಪ್ರಶ್ನಿಸಿದರು. ಆರ್.ಬಿ.ಐ ಅಧಿಕಾರಿ ಅವರೊಂದಿಗೆ ಮಾತನಾಡಲಿ ಮತ್ತು ಅವರ ಚಿಂತೆಯನ್ನು ದೂರ ಮಾಡಲಿ ಎಂಬುದು ಅವರ ಒತ್ತಾಯವಾಗಿದೆ.

ಸರಕಾರದ ವಿರುದ್ಧ ಜನರು ಚಪ್ಪಾಳೆ ಮತ್ತು ತಟ್ಟೆ ಬಾರಿಸುತ್ತಾ ಪ್ರತಿಭಟನೆ ನಡೆಸಿದರು. ತಮಗೆ ನ್ಯಾಯ ಕಲ್ಪಿಸಿ ಎಂಬುದು ಅವರ ಬೇಡಿಕೆಯಾಗಿದೆ. ತಮ್ಮ ಬಳಿ ಚಿಕಿತ್ಸೆಗೆ, ಬಾಡಿಗೆಗೆ ಮಾತ್ರವಲ್ಲ, ರೇಶನ್ ತರಲೂ ಹಣ ಉಳಿದಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಹೋಗುವುದಾದರೂ ಎಲ್ಲಿಗೆ? 11 ತಿಂಗಳುಗಳಿಂದ ನಮ್ಮ ಹಣವನ್ನು ತಡೆಹಿಡಿಯಲಾಗಿದೆ. ನಾವು ಉಣ್ಣುವುದು ಹೇಗೆ, ಬಾಡಿಗೆ ಕಟ್ಟುವುದಾದರೂ ಹೇಗೆ ಎಂದು ಜನರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದೇಶದ ಪ್ರಧಾನಿ ಎಲ್ಲಿ ನಿದ್ರಿಸುತ್ತಿದ್ದಾರೆ ಮತ್ತು ಎಲ್ಲಿ ಜಾಗರಣೆ ಮಾಡುತ್ತಿದ್ದಾರೆ. ನಮಗೊಂದೂ ತಿಳಿಯುತ್ತಿಲ್ಲ. ಜನಸಾಮಾನ್ಯರು ರೋದಿಸುತ್ತಿದ್ದಾರೆ ಮತ್ತು ಸರಕಾರ ದೇಶದ ಹೆಸರನ್ನು ಉತ್ತುಂಗಕ್ಕೇರಿಸುವ ಮಾತುಗಳನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಬಂದು ನಮ್ಮ ಪರಿಸ್ಥಿತಿಯನ್ನು ಆಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರಿಗಾಗಿ ಸರಕಾರವು ಯಾವುದೇ ಕ್ರಮಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ನಮ್ಮ ಹಣವನ್ನು ಸುರಕ್ಷಿತವಾಗಿಡಲು ಯಾವ ಬ್ಯಾಂಕ್ ಉತ್ತಮ ಎಂದು ನಮಗೆ ತಿಳಿಸಲಿ. ಯಾಕೆಂದರೆ ಒಂದರ ಹಿಂದೆ ಒಂದರಂತೆ ಬ್ಯಾಂಕುಗಳು ವಿವಾದದಲ್ಲಿ ಸಿಲುಕುತ್ತಾ ಸಾಗುತ್ತಿವೆ. ಇದು ಜನರು ಮುಂದಿಡುವ ಪ್ರಶ್ನೆಯಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!