Home ಟಾಪ್ ಸುದ್ದಿಗಳು ಅಕ್ರಮ ಜಲಪ್ರವೇಶ- 135 ಭಾರತೀಯ ಮೀನುಗಾರರನ್ನು ಬಂಧಿಸಿದ ಬಾಂಗ್ಲಾ ಪೊಲೀಸ್

ಅಕ್ರಮ ಜಲಪ್ರವೇಶ- 135 ಭಾರತೀಯ ಮೀನುಗಾರರನ್ನು ಬಂಧಿಸಿದ ಬಾಂಗ್ಲಾ ಪೊಲೀಸ್

ಢಾಕಾ: ಬಾಂಗ್ಲಾ ಕೊಲ್ಲಿಯಿಂದ ಅಕ್ರಮವಾಗಿ ಬಾಂಗ್ಲಾದೇಶದ ಜಲ ಪ್ರದೇಶವನ್ನು ಪ್ರವೇಶಿಸಿದ್ದ 135 ಭಾರತೀಯ ಮೀನುಗಾರರನ್ನು ಬಾಂಗ್ಲಾದೇಶ ನೌಕಾಪಡೆಯು ಬಂಧಿಸಿದ್ದು 8 ಮೀನುಗಾರಿಕೆ ಟ್ರಾಲರ್ಗಳನ್ನು ವಶಪಡಿಸಿಕೊಂಡಿದೆ.

ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ನೌಕಾಪಡೆ ಸಿಬ್ಬಂದಿ 2 ಬಾರಿ ದಾಳಿ ನಡೆಸಿ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ.

ನೌಕಾಪಡೆಯ ಹಡಗುಗಳಾದ ಬನೌಹಾ ಪ್ರತ್ಯ ಮತು ಅಲಿ ಹೈದರ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ಈ ಸಂದರ್ಭದಲ್ಲಿ ಮೊದಲ ಹಂತದಲ್ಲಿ 4 ಟ್ರಾಲರ್ಗಳೊಂದಿಗೆ 68 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಆ ಬಳಿಕ 67 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡು 4 ಟ್ರಾಲರ್ ಗಳನ್ನು ಮತ್ತೆ ವಶಪಡಿಸಿದರು ಎನ್ನಲಾಗಿದೆ.

Join Whatsapp
Exit mobile version