Home ಟಾಪ್ ಸುದ್ದಿಗಳು ಬಾಂಗ್ಲಾ ಬಿಕ್ಕಟ್ಟು: ಮಾಜಿ ಕ್ರಿಕೆಟರ್ ಮಶ್ರಫೆ ಮೊರ್ತಜಾ ಮನೆಗೆ ಬೆಂಕಿ

ಬಾಂಗ್ಲಾ ಬಿಕ್ಕಟ್ಟು: ಮಾಜಿ ಕ್ರಿಕೆಟರ್ ಮಶ್ರಫೆ ಮೊರ್ತಜಾ ಮನೆಗೆ ಬೆಂಕಿ

ಢಾಕಾ: ಬಾಂಗ್ಲಾದೇಶದಲ್ಲಿ ಅರಾಜಕತೆಯಿಂದ ಉಂಟಾಗಿರುವ ಹಿಂಸಾಚಾರದಲ್ಲಿ ಬಾಂಗ್ಲಾದೇಶ ಮಾಜಿ ಕ್ರಿಕೆಟರ್ ಹಾಗೂ ಅವಾಮಿ ಲೀಗ್ ಪಕ್ಷದ ಸಂಸದ ಮಶ್ರಫೆ ಮೊರ್ತಜಾ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.


ಕುಲ್ನಾ ವಲಯದ ನರಾಲಿಯಲ್ಲಿನ ಮೊರ್ತಜಾ ಅವರ ಮನೆಗೆ ಸೋಮವಾರ ಬೆಂಕಿ ಇಟ್ಟು ಹಾನಿಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.


ನರಾಲಿ–2 ಲೋಕಸಭಾ ಕ್ಷೇತ್ರದಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷದಿಂದ ಮೊರ್ತಜಾ ಅವರು ಗೆದ್ದಿದ್ದರು.

Join Whatsapp
Exit mobile version