ಬೆಂಗಳೂರು: ಉದ್ಯಮದಲ್ಲಿ ಸಾಧನೆ ಮಾಡಿದ 30 ವರ್ಷ ಒಳಗಿನ ಯುವ ಪ್ರತಿಭೆಗಳನ್ನು ಗುರುತಿಸುವ ಪ್ರತಿಷ್ಠಿತ “ಏಷಿಯಾ ಪೋರ್ಬ್ಸ್” (ಅಂಡರ್ 30) ತನ್ನ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ನಗರದ ಯುವ ಉದ್ಯಮಿ ವಿಭಾ ಹರೀಶ್ ಅವರು ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
ವಿಶ್ವಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿತ್ತು. ಅದರ ನಡುವೆಯೂ ವಿಭಾ ಹರೀಶ್ ಅವರ ಸಾಧನೆಯನ್ನು ಗುರುತಿಸಿರುವ ಫೋರ್ಬ್ಸ್, ಇವರ ಸಂಸ್ಥೆಯ ವಿಶೇಷತೆಯಿಂದ ಇವರನ್ನು ಆಯ್ಕೆ ಮಾಡಿದೆ.
25 ವರ್ಷ ವಯಸ್ಸಿನ ವಿಭಾ ಅವರು, ಸಣ್ಣ ವಯಸ್ಸಿನಲ್ಲಿಯೇ “ಕಾಸ್ಮಿಕ್ಸ್” ಎಂಬ ಸ್ಟಾರ್ಟ್‌ಅಪ್ ಪ್ರಾರಂಭಿಸಿದ್ದಾರೆ, ಈ ಸಂಸ್ಥೆ ಮೂಲಕ ಅವರು ಆರೋಗ್ಯ ಸಂಬಂಧಿತ ನ್ಯೂಟ್ರೀಷಿಯನ್ಸ್, ಸಪ್ಲಿಮೆಂಟ್ಸ್‌ಗಳನ್ನು ತಯಾರು ಮಾಡಿ, ಜನರ ಆರೋಗ್ಯ ಕಾಪಾಡುವಲ್ಲಿ ಈ ಸ್ಟಾರ್ಟ್‌ಅಪ್ಸ್ ಕೆಲಸ ಮಾಡುತ್ತಿದೆ.
ವಿಶ್ವದಲ್ಲಿ ಕೋವಿಡ್‌ನ ಮೊದಲ ಅಲೆ ಪ್ರಾರಂಭವಾಗುವುದಕ್ಕೂ ಮೊದಲೇ ಕಾಸ್ಮಿಕ್ಸ್ ಸಂಸ್ಥೆ ಹುಟ್ಟಿಕೊಂಡಿತು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬ್ರಾಂಡ್ ಆಗಿ ಹೊರಹೊಮ್ಮಿರುವ ಈ ಸಂಸ್ಥೆ, ದೇಶದೆಲ್ಲೆಡೆ ಹೆಸರು ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನ್ಯೂಟ್ರೀಷಿಯನ್ ಆಹಾರ ಸೇವನೆ ಅತ್ಯಂತ ಅವಶ್ಯಕ. ಹೀಗಾಗಿ ಒವರ ಸಂಸ್ಥೆಯ ಗುಣಮಟ್ಟದ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಹೀಗಾಗಿ ಆನ್‌ಲೈನ್ ಮೂಳವೂ ಇವರ ಪದಾರ್ಥಗಳು ಲಭ್ಯವಿದೆ.
ಪ್ರಸ್ತುತ ಕೋವಿಡ್ ಎರಡನೇ ಅಲೆ ಅಪ್ಪಳಿಸುತ್ತಿದೆ. ಹೀಗಾಗಿ ಈ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ಸ್ಪಿರುಲಿನ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಕಡಿಮೆಯಾಗಿ, ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.