Home ಟಾಪ್ ಸುದ್ದಿಗಳು PFI ಜೊತೆ RSS ಕೂಡ ಬ್ಯಾನ್ ಮಾಡಿ: ಕಾಂಗ್ರೆಸ್ ಸಂಸದ

PFI ಜೊತೆ RSS ಕೂಡ ಬ್ಯಾನ್ ಮಾಡಿ: ಕಾಂಗ್ರೆಸ್ ಸಂಸದ

ನವದೆಹಲಿ: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಟೀಕಿಸಿದ್ದು, ಪಿಎಫ್ ಐ ಜೊತೆ ಆರ್ ಎಸ್ ಎಸ್ ಕೂಡ ಬ್ಯಾನ್ ಆಗಬೇಕು ಎಂದು ಆಗ್ರಹಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ ರೀತಿಯಲ್ಲೇ ಆರ್ಎಸ್ಎಸ್ ಸಹ ನಿಷೇಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಕೇವಲ ಪಿಎಫ್ಐ ನಿಷೇಧಿಸುವುದೊಂದೇ ಪರಿಹಾರವಲ್ಲ. ಆರ್ಎಸ್ಎಸ್ ಕೂಡ ದೇಶದಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ’ ಎಂದು ಹೇಳಿದರು.

Join Whatsapp
Exit mobile version