Home ಟಾಪ್ ಸುದ್ದಿಗಳು ನಾಳೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇದ: ಬಿಬಿಎಂಪಿಯಿಂದ ಹೊಸ ಸುತ್ತೋಲೆ

ನಾಳೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇದ: ಬಿಬಿಎಂಪಿಯಿಂದ ಹೊಸ ಸುತ್ತೋಲೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯಂದು (ಆಗಸ್ಟ್ 31) ಬೆಂಗಳೂರಿನಲ್ಲಿ ಮಾಂಸ ವಧೆಯನ್ನು ನಿಷೇಧಿಸಿದೆ.

ಗಣೇಶ ಚತುರ್ಥಿಯ ದೃಷ್ಟಿಯಿಂದ ನಿಷೇಧವನ್ನು ವಿಧಿಸಲು ನಾಗರಿಕ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು ಈ ನಿಷೇಧವು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೆ ಅನ್ವಯಿಸುತ್ತದೆ.

ಗಣೇಶ ಚತುರ್ಥಿ ದಿನದಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.. ಆಗಸ್ಟ್ 31ರ ಬುಧವಾರದಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜಂಟಿ ನಿರ್ದೇಶಕರು (ಪಶುಸಂಗೋಪನೆ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರಾಟ ಮಳಿಗೆಗಳಲ್ಲಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ‌ ಸುತ್ತೋಲೆ‌ ಹೊರಡಿಸಿದೆ.

Join Whatsapp
Exit mobile version