Home ಕರಾವಳಿ ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧ: ನಷ್ಟದ ಹೊರೆಯಲ್ಲೇ ಬೋಟುಗಳನ್ನು ಲಂಗರು ಹಾಕಿದ ಮಾಲೀಕರು

ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧ: ನಷ್ಟದ ಹೊರೆಯಲ್ಲೇ ಬೋಟುಗಳನ್ನು ಲಂಗರು ಹಾಕಿದ ಮಾಲೀಕರು

ಮಂಗಳೂರು: ಇಂದಿನಿಂದ (ಜೂ 1) ಜು. 31ರವರೆಗೆ ರಾಜ್ಯ ಸರಕಾರ ಯಾಂತ್ರಿಕ ಮೀನುಗಾರಿಕೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಯಾಂತ್ರಿಕ ಮೀನುಗಾರರು ನಷ್ಟದ ಹೊರೆಯಲ್ಲೇ ತಮ್ಮ ಬೋಟುಗಳನ್ನು ಲಂಗರು ಹಾಕಿದ್ದಾರೆ.

ಯಾಂತ್ರಿಕ ಮೀನುಗಾರಿಕೆಗೆ ಇಂದಿನಿಂದ ಸಂಪೂರ್ಣ ನಿಷೇಧ ಬೀಳಲಿದ್ದು ಎಪ್ರಿಲ್‌, ಮೇ ತಿಂಗಳು ವಿಪುಲ ವಾಗಿ ಮೀನುಗಾರಿಕೆ ನಡೆಸುವ ಸಮಯವಾಗಿದೆ. ಅದೇ ಎರಡು ತಿಂಗಳಲ್ಲಿ ಅತ್ಯಧಿಕ ಸ‌ಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ.

ಏರುತ್ತಿರುವ ಡೀಸೆಲ್‌ ದರಕ್ಕೆ ಕಂಗೆಟ್ಟ ಮಾಲೀಕರು ನಷ್ಟದ ಹೊರೆಯಲ್ಲೇ ಬೋಟುಗಳನ್ನು ದಡ ಸೇರಿಸಿದ್ದಾರೆ.

Join Whatsapp
Exit mobile version