ಉಳ್ಳಾಲ: ದಾರಿಯಲ್ಲಿ ಸಿಕ್ಕ 9 ಪವನ್ ಚಿನ್ನದ ನೆಕ್ಲೇಸ್ ಅನ್ನು ವಾರಸುದಾರರಿಗೆ ಮರಳಿಸಿ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ H.ಕಲ್ಲು ಮಾನವೀಯತೆ ಮೆರೆದಿದ್ದಾರೆ.
ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಸಮಾಜ ಸೇವಕ ಹನೀಫ್ ಅವರು ಬಾಳೆಪುಣಿ ಗ್ರಾಮದ ನಾಲ್ಕನೇ ವಾರ್ಡಿನ ಸದಸ್ಯರಾಗಿದ್ದಾರೆ.
ಬಡವರ ಪಾಲಿಗೆ ಆಪತ್ಬಾಂಧವ
ಆರ್ಥಿಕವಾಗಿ ಹಿಂದುಳಿದ ಅದೆಷ್ಟೋ ರೋಗ ಪೀಡಿತ ಜನರ ಚಿಕಿತ್ಸೆಗಾಗಿ ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಅವರ ಯೋಗಕ್ಷೇಮ ನೋಡಿಕೊಂಡಿರುವ ಹನೀಫ್, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ.