Home ಟಾಪ್ ಸುದ್ದಿಗಳು ಕಾಶ್ಮೀರ ಕುರಿತು ಟ್ವೀಟ್ ಆರೋಪ; ಕೆ.ಎಫ್.ಸಿ ಮುಚ್ಚುವಂತೆ ಒತ್ತಾಯಿಸಿ ಬಜರಂಗದಳ ದಾಂಧಲೆ

ಕಾಶ್ಮೀರ ಕುರಿತು ಟ್ವೀಟ್ ಆರೋಪ; ಕೆ.ಎಫ್.ಸಿ ಮುಚ್ಚುವಂತೆ ಒತ್ತಾಯಿಸಿ ಬಜರಂಗದಳ ದಾಂಧಲೆ

ಸೂರತ್: ಕೆ.ಎಫ್. ಸಿ ಆಹಾರ ಸಂಸ್ಥೆ ಆಡಳಿತ ಮಂಡಳಿಯು ಕಾಶ್ಮೀರದ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಮಳಿಗೆಯನ್ನು ಮುಚ್ಚುವಂತೆ ಒತ್ತಾಯಿಸಿ ಬಜರಂಗದಳ ದಾಂಧಲೆ ನಡೆಸಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಕೆ.ಎಫ್.ಸಿ ಆಹಾರ ಮಳಿಗೆಯನ್ನು ಮುಚ್ಚುವಂತೆ ಆಗ್ರಹಿಸಿ ಬಜರಂಗದಳದ ಸಂಚಾಲಕ ಜ್ವಾಲಿತ್ ಮೆಹ್ತಾ ಎಂಬಾತನ ನೇತೃತ್ವದಲ್ಲಿ ಕಾರ್ಯಕರ್ತರು ಆಹಾರ ಮಳಿಗೆಯ ಮುಂಭಾಗದಲ್ಲಿ ಜಮಾಯಿಸಿ, ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ದಾಂಧಲೆ ಆರಂಭಿಸಿದ್ದರು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಜ್ವಾಲಿತ್ ಮೆಹ್ತಾ, ಕೆ.ಎಫ್.ಸಿ ಕಂಪೆನಿಗಳು ಕಾಶ್ಮೀರದ ಭಾರತದ ಭಾಗವೆಂದು ಮತ್ತೆ ಟ್ವೀಟ್ ಮಾಡದ ಹೊರತು ಈ ಸಂಸ್ಥೆಯಲ್ಲಿ ವ್ಯವಹಾರ ಮುಂದುವರಿಸಲು ಬಿಡುವುದಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೆ.ಎಫ್.ಸಿ ಆಹಾರ ಮಳಿಗೆಯನ್ನು ಗುರಿಯಾಗಿಸಿ ಬಜರಂಗದಳ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಜರಂಗದಳದ ನಡೆಗೆ ಪರ – ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

Join Whatsapp
Exit mobile version