Home ಟಾಪ್ ಸುದ್ದಿಗಳು ನವರಾತ್ರಿಯ ಶೋಭಾಯಾತ್ರೆಯ ವೇಳೆ ಗಲಭೆ ಸೃಷ್ಟಿಸಿ ಹಿಂಸಾಚಾರ: ಬಜರಂಗದಳದ ನಾಯಕನ ಬಂಧನ

ನವರಾತ್ರಿಯ ಶೋಭಾಯಾತ್ರೆಯ ವೇಳೆ ಗಲಭೆ ಸೃಷ್ಟಿಸಿ ಹಿಂಸಾಚಾರ: ಬಜರಂಗದಳದ ನಾಯಕನ ಬಂಧನ

ಪಾಟ್ನಾ: ನವರಾತ್ರಿಯ ಶೋಭಾಯಾತ್ರೆಯ ವೇಳೆ ಗಲಭೆ ಸೃಷ್ಟಿಸಿ ಹಿಂಸಾಚಾರಗೈದು ತಲೆಮರೆಸಿಕೊಂಡಿದ್ದ ಬಜರಂಗದಳದ ನಾಯಕ ಕುಂದನ್ ಕುಮಾರ್ ಎಂಬಾತನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.


ರಾಮನವಮಿ ಸಂದರ್ಭದಲ್ಲಿ ಬಿಹಾರ್ ಶರೀಫ್’ನಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರವನ್ನು ವ್ಯವಸ್ಥಿತವಾಗಿ ಬಜರಂಗದಳದ ಕಾರ್ಯಕರ್ತರು ನಡೆಸಿದ್ದರು. ಮುಸ್ಲಿಮರ ಮನೆ, ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.


ಈತನ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದ ಪೊಲೀಸರು, ಕೊನೆಗೆ ಆತನ ಆಸ್ತಿ ಜಪ್ತಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಮಧ್ಯೆ ಶನಿವಾರ ಆತನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

Join Whatsapp
Exit mobile version