Home ಟಾಪ್ ಸುದ್ದಿಗಳು ಆಗ್ರಾ: ಪ್ರೇಮಿಗಳ ದಿನಾಚರಣೆಯನ್ನು ತಡೆಯುವ ನೆಪದಲ್ಲಿ ಪುಂಡಾಟಿಕೆ ಮೆರೆದ ಬಜರಂಗದಳ

ಆಗ್ರಾ: ಪ್ರೇಮಿಗಳ ದಿನಾಚರಣೆಯನ್ನು ತಡೆಯುವ ನೆಪದಲ್ಲಿ ಪುಂಡಾಟಿಕೆ ಮೆರೆದ ಬಜರಂಗದಳ

ನವದೆಹಲಿ: ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಯನ್ನು ತಡೆಯುವ ನೆಪದಲ್ಲಿ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು, ವಿವಿಧ ಜೋಡಿಗಳಿಗೆ ತೊಂದರೆ ನೀಡಿ ಪುಂಡಾಟಿಕೆ ಮೆರೆದ ಘಟನೆ ಆಗ್ರಾದಲ್ಲಿ ನಡೆದಿದೆ.

ಅಂತಾರಾಷ್ಟ್ರೀಯ ಹಿಂದೂ ಕೌನ್ಸಿಲ್ ರಾಷ್ಟ್ರೀಯ ಬಜರಂಗದಳ ವಿಭಾಗದ ಅಧ್ಯಕ್ಷ ಅವತಾರ ಸಿಂಗ್ ಗಿಲ್ ಎಂಬಾತನ ನೇತೃತ್ವದಲ್ಲಿ ಬಜರಂಜದಳದ ಕಾರ್ಯಕರ್ತರು ಪಾರ್ಕ್ ಗೆ ದಾಳಿ ನಡೆಸಿ ಜೋಡಿಗೆ ಅಮಾನವೀಯವಾಗಿ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆಯುತ್ತಿರುವ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಜರಂಗದಳದ ಕುಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

https://twitter.com/ckchetanck/status/1493188754827517955

ಪ್ರೇಮಿಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿಗೆ ಮಸಿ ಬಳಿಯಲು ಯತ್ನಿಸಿದರೆ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಈ ರೀತಿಯ ವರ್ತನೆಯನ್ನು ತಡೆಯುವುದಾಗಿ ಅವತಾರ್ ಸಿಂಗ್ ಗಿಲ್ ಜೋಡಿಗಳಿಗೆ ಎಚ್ಚರಿಕೆ ನೀಡುತ್ತಿರುವುದು ವೀಡಿಯೋದಲ್ಲಿದೆ.

Join Whatsapp
Exit mobile version