Home ಟಾಪ್ ಸುದ್ದಿಗಳು ತರಾವೀಹ್ ನಮಾಝ್’ಗೂ ಅಡ್ಡಿ: ಬಜರಂಗದಳದವರಿಂದ ದೂರು

ತರಾವೀಹ್ ನಮಾಝ್’ಗೂ ಅಡ್ಡಿ: ಬಜರಂಗದಳದವರಿಂದ ದೂರು

ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್ ಪ್ರದೇಶದಲ್ಲಿ ಮುಸ್ಲಿಮರು ತರಾವೀಹ್ ನಮಾಝ್ ಸಲ್ಲಿಸುವುದನ್ನು ವಿರೋಧಿಸಿದ ಬಜರಂಗ ದಳದವರು ಈ ಬಗ್ಗೆ ದೂರು ನೀಡಿರುವ ಘಟನೆ ನಡೆದಿದೆ.


ರಾಷ್ಟ್ರೀಯ ಬಜರಂಗ ದಳದ ಒಂದು ಗುಂಪು ಶನಿವಾರ ರಾತ್ರಿ ರಾಜ್ಯ ಅಧ್ಯಕ್ಷ ರೋಹನ್ ಸಕ್ಸೇನಾ ನಾಯಕತ್ವದಲ್ಲಿ ಕಟ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಲಜ್ಪತ್ ನಗರದ ಝಾಕಿರ್ ಹುಸೇನ್ ಎಂಬವರ ಗೋಡೌನ್’ಗೆ ಏಕಾಏಕಿ ದಾಳಿ ದಾಳಿ ಮಾಡಿದೆ.


ಝಾಕಿರ್ ಹುಸೇನ್’ಗೆ ಸೇರಿದ ಗೋಡೌನ್ ಕಟ್ಟಡದಲ್ಲಿ ತರಾವೀಹ್ ನಮಾಝ್ ನಿರ್ವಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಗುಂಪು ಅಲ್ಲಿ ದೊಡ್ಡ ಉದ್ವಿಗ್ನ ಸ್ಥಿತಿಯನ್ನು ಸೃಷ್ಟಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆಸಬೇಕಾಯಿತು.


ಅನಂತರ ಪತ್ರಕರ್ತರೊಡನೆ ಮಾತನಾಡಿದ ಸಕ್ಸೇನಾ, ಹೊಸ ಪರಂಪರೆ, ಪದ್ಧತಿಗಳಿಗೆಲ್ಲ ನಮ್ಮ ನಗರದಲ್ಲಿ ಅವಕಾಶ ನೀಡುವುದಿಲ್ಲ ಎಂದರು.
“ಝಾಕಿರ್ ಹೆಸರಿನಲ್ಲಿ ಮುಸ್ಲಿಮ್ ಸಹೋದರತ್ವದ ಹೊಸ ಪ್ರಾರ್ಥನೆ ಆರಂಭಿಸಿರುವುದಾಗಿ ತಿಳಿದು ಬಂದಿದೆ. ನಾವು ನಮ್ಮ ರಾಜ್ಯದಲ್ಲಿ ಹೊಸ ಸಂಪ್ರದಾಯಗಳಿಗೆಲ್ಲ ಅವಕಾಶ ನೀಡುವುದಿಲ್ಲ” ಎಂದು ಸಕ್ಸೇನಾ ವರದಿಗಾರರಿಗೆ ತಿಳಿಸಿದರು.
“ಮುಸ್ಲಿಂ ಸಮುದಾಯದ ಹಿಂಸಾತ್ಮಕ ವ್ಯಕ್ತಿಗಳ ಮೇಲೆ ಎಫ್’ಐಆರ್ ದಾಖಲಿಸುವಂತೆ ನಾವು ಮತ್ತೆ ಮತ್ತೆ ಪೊಲೀಸರಿಗೆ ತಿಳಿಸಿದ್ದೇವೆ” ಎಂದೂ ಅವರು ಹೇಳಿದರು.
ನಿಮಗೆ ಇದು ಹೇಗೆ ಗೊತ್ತಾಯಿತು ಎಂಬ ಪ್ರಶ್ನೆಗೆ “ನಮಗೆ ನೆರೆಹೊರೆಯವರಿಂದ ತಿಳಿದು ಬಂತು. ಸಾಕ್ಷಿಯಾಗಿ ನಮ್ಮ ಬಳಿ ಫೋಟೋಗಳು ಇವೆ” ಎಂದೂ ಅವರು ಹೇಳಿದರು.
ಪೊಲೀಸರಿಗೆ ಕ್ರಮ ಜರುಗಿಸಲು ತಿಳಿಸಿದ್ದೇವೆ. ಅವರು ಏನೂ ಮಾಡದಿದ್ದರೆ ರಾಷ್ಟ್ರೀಯ ಬಜರಂಗ ದಳ ಬೀದಿಗಿಳಿದು ಹೋರಾಡುತ್ತದೆ ಎಂದು ಅವರು ತಿಳಿಸಿದರು.

Join Whatsapp
Exit mobile version