Home ಟಾಪ್ ಸುದ್ದಿಗಳು ವ್ಯಾಪಕ ಆಕ್ರೋಶ: ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಅಶೋಕ್

ವ್ಯಾಪಕ ಆಕ್ರೋಶ: ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಅಶೋಕ್

ಬೆಂಗಳೂರು: ನಾನು ಗೃಹ ಸಚಿವನಾಗಿದ್ದಾಗ ಬಜರಂಗದಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ಹಾಕಿದ್ದೆ ಎನ್ನುವ ವಿಪಕ್ಷ ನಾಯಕ ಆರ್​ ಅಶೋಕ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್​ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪತ್ರ ಬರೆದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಆರ್​ ಅಶೋಕ್​, ಬಜರಂಗ ದಳದ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆಶೋಕ್, ರಾಮನಗರದ ವಕೀಲರು ಜ್ಞಾನವಾಪಿ ದೇಗುಲ ಬಗ್ಗೆ ಪೋಸ್ಟ್ ಮಾಡಿದ್ರು. ಆ ವಿಚಾರವಾಗಿ ಪ್ರಸ್ತಾಪಿಸಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಕೂಡ 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಹೇಳಿದರು.

Join Whatsapp
Exit mobile version