Home ಕರಾವಳಿ ಅಸೈಗೋಳಿ | ಕೊಲೆಯತ್ನ ಪ್ರಕರಣ, ಆರೋಪಿಗಳಿಗೆ ಜಾಮೀನು

ಅಸೈಗೋಳಿ | ಕೊಲೆಯತ್ನ ಪ್ರಕರಣ, ಆರೋಪಿಗಳಿಗೆ ಜಾಮೀನು

ಮಂಗಳೂರು : ಗ್ರಾಮ ಪಂಚಾಯಿತ್ ಚುನಾವಣೆ ವಿಚಾರದಲ್ಲಿ ರಾಜ್ಯ ಹಜ್ ಸಮಿತಿ ಸದಸ್ಯನ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ.‌

ಗ್ರಾಮ ಪಂಚಾಯಿತ್ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತ, ಹಜ್ ಸಮಿತಿ ಸದಸ್ಯರೂ ಆಗಿರುವ ಮೊಹಮ್ಮದ್ ಹನೀಫ್ ಅವರು ಮಂಜನಾಡಿ ಗ್ರಾಮ‌ದಿಂದ ಸ್ಪರ್ಧಿಸಲು ಮುಂದಾಗಿದ್ದರು.‌ ಇದರಿಂದ ಅಸಮಾಧಾನಗೊಂಡ ಆರೋಪಿಗಳಾದ ಅಬ್ದುಲ್ ಕರೀಂ ಮತ್ತು ಹೈದರಾಲಿ ಎಂಬವರು ಹನೀಫ್ ಅವರನ್ನು ಮನೆಗೆ ಕರೆಸಿ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದರು. ಇದರಿಂದಾಗಿ ತಲೆ ಒಡೆದು ಗಂಭೀರ ಗಾಯಗೊಂಡ ಹನೀಫ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚುನಾವಣೆ ಸನಿಹದಲ್ಲಿರುವಾಗ ಈ ಘಟನೆ ನಡೆದ ಕಾರಣ ಪ್ರಕರಣ ರಾಜಕೀಯವಾಗಿಯೂ ತಿರುವು ಪಡೆದಿತ್ತು.

ಪ್ರಕರಣ ದಾಖಲಿಸಿದ್ದ ಕೊಣಾಜೆ ಪೊಲೀಸರು, ಆರೋಪಿಗಳನ್ನು ಬಂಧಿಸಲು ಹೋದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಬ್ದುಲ್ ಕರೀಂ ವಿರುದ್ಧ ಹೆಚ್ಚುವರಿ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಶುಕ್ರವಾರ ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಆರೋಪಿ ಅಬ್ದುಲ್ ಕರೀಂ ಪರವಾಗಿ ನ್ಯಾಯವಾದಿ ಆಸಿಫ್ ಬೈಕಾಡಿ ಮತ್ತು ಹೈದರಾಲಿ ಪರವಾಗಿ ನ್ಯಾಯವಾದಿ ಮಹಮ್ಮದ್ ಅಸ್ಗರ್ ವಾದಿಸಿದ್ದಾರೆ.

Join Whatsapp
Exit mobile version