Home ಟಾಪ್ ಸುದ್ದಿಗಳು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ಉದ್ಯಮಿ ರಾಜ್ ಕುಂದ್ರಾರಿಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಲಯ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ಉದ್ಯಮಿ ರಾಜ್ ಕುಂದ್ರಾರಿಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಲಯ

ಮುಂಬೈ ಜುಲೈ 28: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಹಾಯಕ ರಿಯಾನ್ ಥಾರ್ಪ್ ಅವರಿಗೆ ಮುಂಬೈ ನ್ಯಾಯಾಲಯವು ಇಂದು ಜಾಮೀನು ನಿರಾಕರಿಸಿದೆ. ಅಶ್ಲೀಲ ವೀಡಿಯೋ ಚಿತ್ರೀಕರಣ ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಮೇಲಿನ ಆರೋಪಿಗಳಿಗೆ ಜಾಮೀನು ನಿರಾಕರಿಸಲಾಗಿದೆ. ಇದರೊಂದಿಗೆ ನಿನ್ನೆ ಕುಂದ್ರಾ ಅವರ ಕಸ್ಟಡಿ ಅವಧಿಯನ್ನು ಒಂದು ವಾರದ ಅಂತರದಲ್ಲಿ ಮೂರನೇ ಬಾರಿಗೆ ಎರಡು ವಾರಕ್ಕೆ ವಿಸ್ತರಿಸಲಾಗಿದೆ.

ಕಳೆದ ಸೋಮವಾರ ಕುಂದ್ರಾ ಅವರನ್ನು ಬಂಧಿಸಿ, ಮರುದಿನ ರಿಯಾನ್ ಥಾರ್ಪ್ ಅವರನ್ನು ಬಂಧಿಸಲಾಗಿತ್ತು. 45 ವರ್ಷದ ಉದ್ಯಮಿಯ ವಿರುದ್ಧ ಆತನ ನಾಲ್ವರು ನೌಕರರು ಸಾಕ್ಷಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಇಂದಿಗೆ ಮುಂದೂಡಿತ್ತು. ಇಂದು ಮಧ್ಯಾಹ್ನ ಮುಂಬೈ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದೆ.


ರಾಜ್ ಕುಂದ್ರಾ ಅವರ ಅಪ್ಲೀಕೇಶನ್ ಹಾಟ್‌ಶಾಟ್‌ ವಿರುದ್ಧ ಕೇಂದ್ರ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಆಂಡ್ರಾಯ್ಡ್ ಫೋನ್‌ಗಳು ಮತ್ತು ಆಪಲ್‌ನ ಆಪ್ ಸ್ಟೋರ್‌ಗಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಅನ್ನು ತೆಗೆದುಹಾಕಲಾಗಿತ್ತು. ಆದ್ದರಿಂದ ಆರೋಪಿಗಳು ಅಪ್ಲೀಕೇಶನ್ ಗಾಗಿ ಪರ್ಯಾಯವನ್ನು ಕಂಡುಹಿಡಿದು ಬೋಲಿಫೇಮ್ ಎಂಬ ಆ್ಯಪ್ ಅನ್ನು ಪ್ರಾರಂಭಿಸಿದ್ದರು.


ಕಳೆದ ವಾರ ಕುಂದ್ರಾರವರು ಈ ಪ್ರಕರಣದಲ್ಲಿ ತಮ್ಮ ಬಂಧನವನ್ನು ಕೋರ್ಟ್ ನಲ್ಲಿ ಪ್ರಶ್ನಿಸಿ ಕೇಂದ್ರ ತನಿಖೆ ನಡೆಸುತ್ತಿರುವ ವೀಡಿಯೋವನ್ನು ಕಾಮಪ್ರಚೋದಕ ಎಂದು ಬಣ್ಣಿಸಬಹುದೆ ಹೊರತು ಸ್ಪಷ್ಟ ಲೈಂಗಿಕ ಕ್ರಿಯೆಯಂತೆ ಬಿಂಬಿಸಬಾರದೆಂದು ಅವರು ತಿಳಿಸಿದ್ದರು. ಈ ಕುರಿತು ವಾದ ಆಲಿಸಿದ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಇಂದು ತಿರಸ್ಕರಿಸಿದೆ

Join Whatsapp
Exit mobile version