Home ಟಾಪ್ ಸುದ್ದಿಗಳು ಜಹಾಂಗೀರ್ ಪುರಿ ಘಟನೆ : ಬುಲ್ಡೋಜರ್ ಕಾರ್ಯಾಚರಣೆಗೆ ‘ಬಹುತ್ವ ಕರ್ನಾಟಕ’ ತೀವ್ರ ಆಕ್ಷೇಪ

ಜಹಾಂಗೀರ್ ಪುರಿ ಘಟನೆ : ಬುಲ್ಡೋಜರ್ ಕಾರ್ಯಾಚರಣೆಗೆ ‘ಬಹುತ್ವ ಕರ್ನಾಟಕ’ ತೀವ್ರ ಆಕ್ಷೇಪ

ಬೆಂಗಳೂರು: ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ದೆಹಲಿಯ ಜಹಂಗೀರ್ ಪುರಿಯಲ್ಲಿ ನಡೆದ ಬುಲ್ಡೋಜರ್ ಕಾರ್ಯಾಚರಣೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗತೊಡಗಿದೆ. ಗುರುವಾರ ರಾಜ್ಯದಲ್ಲೂ ‘ಬಹುತ್ವ ಕರ್ನಾಟಕ’ ವತಿಯಿಂದ ವಿಶಿಷ್ಠ ರೀತಿಯ ಪ್ರತಿಭಟನೆ ನಡೆಯಿತು.

ಹಲವರು ಭಿತ್ತಿಪತ್ರಗಳನ್ನು ಹಿಡಿದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಜೊತೆಗೆ, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಗಳಲ್ಲೂ #StopDemolitionOfMuslimHomes ಎಂಬ ಹ್ಯಾಷ್ ಟ್ಯಾಗ್ ನಡಿ ಬಹುತ್ವ ಕರ್ನಾಟಕ ವೇದಿಕೆಯಡಿ ಅಭಿಯಾನವನ್ನು ನಡೆಸಿದರು.

ಮಹಿಳೆಯರು, ಮಕ್ಕಳು, ಯುವ ಸಮುದಾಯವು ಈ ವಿಭಿನ್ನ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರ ಹಾಗೂ ಆಪ್ ನೇತೃತ್ವದ ದೆಹಲಿ ಸರಕಾರದ ವಿರುದ್ಧವೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮನೆಗಳಲ್ಲಿ, ನಗರದ ಪ್ರಮುಖ ಬೀದಿಗಳಲ್ಲಿ, ಕರ್ತವ್ಯದ ಸ್ಥಳಗಳಲ್ಲೂ ನಿಂತು ಭಿತ್ತಿಪತ್ರ ಹಿಡಿದು ಗಮನ ಸೆಳೆದರು.

Join Whatsapp
Exit mobile version