Home ಟಾಪ್ ಸುದ್ದಿಗಳು ಭಾರತದಲ್ಲಿ ಮುಂದುವರಿದ ಮುಸ್ಲಿಮ್ ವಿರೋಧಿ ಹಿಂಸಾಚಾರ| ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ ನೀಡಿದ ಬಹ್ರೈನ್

ಭಾರತದಲ್ಲಿ ಮುಂದುವರಿದ ಮುಸ್ಲಿಮ್ ವಿರೋಧಿ ಹಿಂಸಾಚಾರ| ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ ನೀಡಿದ ಬಹ್ರೈನ್

ಮನಾಮ: ಭಾರತದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಸಂಘಪರಿವಾರದ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾಚಾರವನ್ನು ಬಹ್ರೈನ್ ತೀವ್ರವಾಗಿ ಖಂಡಿಸಿದೆ.

ತನ್ನ ಕಾಯ್ದೆಯನ್ನು ಸರಿಪಡಿಸದಿದ್ದರೆ ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಬಹಿಷ್ಕಾರ ಸೇರಿದಂತೆ ಭಾರತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಹ್ರೈನ್ ಮಂತ್ರಿಮಂಡಲದ ಶಾಸಕ ಅಬ್ದುಲ್ ರಝಾಕ್ ಹತ್ತಾಬ್ ಅವರು ಎಚ್ಚರಿಸಿದ್ದಾರೆ.

ಸಂಸತ್ತಿನಲ್ಲಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಮುಸ್ಲಿಮರು ವ್ಯಾಪಕ ಹಿಂಸಾಚಾರ, ನಿಂದನೆ ಮತ್ತು ವ್ಯವಸ್ಥಿತ ಹತ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತದಲ್ಲಿ ಶೋಷಣೆಯ ಆಚರಣೆಯನ್ನು ಮುಂದುವರಿಸಲಾಗುತ್ತಿದೆ ಮತ್ತು ಮುಸ್ಲಿಮರ ಹಕ್ಕು, ಸ್ವಾತಂತ್ರ್ಯ, ಧಾರ್ಮಿಕ ಆಚರಣೆಗಳನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಭಾರತದ ಈ ನಡೆ ಅಂತರಾಷ್ಟ್ರೀಯ ಕಾನೂನು ಮತ್ತು ಅಬ್ರಹಾಮಿಕ್ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ. ಮಾತ್ರವಲ್ಲ ಮಾನವೀಯತೆ ಮತ್ತು ನಾಗರಿಕರ ಸುರಕ್ಷತೆ, ಧರ್ಮ ಮತ್ತು ನಂಬಿಕೆಗಳನ್ನು ಲೆಕ್ಕಿಸದೆ ಸ್ವಾತಂತ್ರ್ಯವನ್ನು ಒದಗಿಸುವ ದೇಶದ ಜವಬ್ದಾರಿಗೆ ವಿರುದ್ಧವಾಗಿದೆ ಎಂದು ಬಹ್ರೈನ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹ್ರೈನ್ ಮತ್ತು ಭಾರತದ ನಡುವಿನ ಅಂತರಾಷ್ಟ್ರೀಯ ವ್ಯಾಪಾರ ವಾರ್ಷಿಕ 105 ಶತಕೋಟಿ ಡಾಲರ್ ಗಳನ್ನು ಮೀರಿದೆ. ಮುಸ್ಲಿಮರ ಮೇಲಿನ ಹಿಂಸಾಚಾರ, ನಿರ್ಬಂಧವನ್ನು ಮುಂದುವರಿಸಿದರೆ ಭಾರತವು ಆರ್ಥಿಕ ದಿಗ್ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಅಬ್ದುಲ್ ರಝಾಕ್ ಎಚ್ಚರಿಸಿದರು

Join Whatsapp
Exit mobile version