►ಪತಿಗಿಂತ ಸಂಯುಕ್ತ ಪಾಟೀಲ್ ಶ್ರೀಮಂತೆ
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದರು.
ಇಂದು(ಏಪ್ರಿಲ್ 15) ಬೆಳಗ್ಗೆ ಬನಶಂಕರಿ ದೇವರ ದರ್ಶನ ಪಡೆದು ಹೆಗಲಿಗೆ ಕಂಬಳಿ ಹಾಕಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದರು.
ಸಂಯುಕ್ತ ಪಾಟೀಲ್ ಅವರು ತಮ್ಮ ನಾಮಪತ್ರದಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, ಪತಿಗಿಂತ ಸಂಯುಕ್ತ ಪಾಟೀಲ್ ಶ್ರೀಮಂತರಾಗಿರುವುದು ವಿಶೇಷ. ಸಂಯುಕ್ತಾ ಪಾಟೀಲ್ ಚರಾಸ್ಥಿ ಒಟ್ಟು 93,66,574.74 ರೂ ಮೌಲ್ಯದರಾಗಿದ್ದರೆ, ಸ್ಥಿರಾಸ್ತಿ 1,12,77,550 ರೂ. ಇದೆ. ಇದರೊಂದಿಗೆ ಸಂಯುಕ್ತ ಪಾಟೀಲ್ ಅವರ ಒಟ್ಟು ಆಸ್ತಿ ಮೌಲ್ಯ 2 ಕೋಟಿ 6 ಲಕ್ಷದ 44 ಸಾವಿರದ 124 ರೂ. ಇದೆ ಎಂದು ಅಫಿಡೆವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ. ಸಂಯುಕ್ತಾ ಪಾಟೀಲ್ ಅವರ ಬಳಿ 500ಗ್ರಾಂ ಅಂದರೆ ಅರ್ಧ ಕೆಜಿ ಚಿನ್ನ ಮತ್ತು 5 ಕೆಜಿ ಬೆಳ್ಳಿ ಇದ್ದರೆ, ಪತಿ ಶಿವಕುಮಾರ್ ಅವರು 510 ಗ್ರಾಂ ಚಿನ್ನ ಹೊಂದಿದ್ದಾರೆ. ಇಷ್ಟೇ ಅಲ್ಲದೇ ಸಂಯುಕ್ತ ಪಾಟೀಲ್ ಸುಮಾರು 47 ಎಕರೆ ಭೂ ಒಡತಿಯಾಗಿದ್ದಾರೆ.
ಸಂಯುಕ್ತಾ ಪಾಟೀಲ್ 2 ಲಕ್ಷ 39 ಸಾವಿರ ನಗದು ಹಣ ಇದೆ. ಇನ್ನು ವಿವಿಧ ಬ್ಯಾಂಕ್ ಖಾತೆಯಲ್ಲಿ 57 ಲಕ್ಷದ 27 ಸಾವಿರದ 573 ರೂ. ಇದೆ. ಇನ್ನು ಪತಿ ಶಿವಕುಮಾರ್ ಕೈಯಲ್ಲಿ 1 ಲಕ್ಷದ 72 ಸಾವಿರ ರೂ.ನಗದು ಹಣ ಇದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 42 ಲಕ್ಷದ 49 ಸಾವಿರದ 270 ರೂ. ಇದೆ ಎಂದು ಅಫಿಡೆವಿಟ್ನಲ್ಲಿ ಮಾಹಿತಿ ನೀಡಿದ್ದಾರೆ.