Home ಕರಾವಳಿ ವಿದ್ಯಾನಗರ | ರಂಝಾನ್ ಪ್ರಯುಕ್ತ ಮಹಿಳೆಯರಿಗಾಗಿ ‘ಬದ್ರ್ ಯಂಗ್ ಮೆನ್ಸ್’ ವತಿಯಿಂದ ವಿಶೇಷ ತರಗತಿ

ವಿದ್ಯಾನಗರ | ರಂಝಾನ್ ಪ್ರಯುಕ್ತ ಮಹಿಳೆಯರಿಗಾಗಿ ‘ಬದ್ರ್ ಯಂಗ್ ಮೆನ್ಸ್’ ವತಿಯಿಂದ ವಿಶೇಷ ತರಗತಿ

ಉಳ್ಳಾಲ :  ನರಿಂಗಾನ ಗ್ರಾಮದ ವಿದ್ಯಾನಗರ ಎಂಬಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಬದ್ರ್ ಯಂಗ್ ಮೆನ್ಸ್, ಬದ್ರಿಯಾ ನಗರ ಇದರ ವತಿಯಿಂದ ರಂಝಾನ್ ಪ್ರಯುಕ್ತ ಮಹಿಳೆಯರಿಂದಲೇ ಮಹಿಳೆಯರಿಗೆ ವಿಶೇಷ ತರಗತಿ ನಡೆಯಲಿದೆ.

  ವಿದ್ಯಾನಗರದ ಬದ್ರಿಯಾ ನಗರ ರೌಲತುಲ್ ಉಲೂಂ ಮದರಸದಲ್ಲಿ ನಡೆಯುವ ಈ ತರಗತಿಯು ರಂಝಾನಿನ ಪ್ರತೀ ಆದಿತ್ಯವಾರದಂದು ಬೆಳಿಗ್ಗೆ 10ರಿಂದ 12ಗಂಟೆ ತನಕ ನಡೆಯಲಿದೆ.

ದಿನಾಂಕ : 18-04-2021 ಆದಿತ್ಯವಾರದಂದು ಶಮೀಮಾ ಅಲ್ ಕಾಮಿಲಾ, ದಿನಾಂಕ: 25-04-2021ರಂದು ನಫೀಸತುಲ್ ಮಿಶ್ರಿಯಾ ಸ್ವಾಫಿಯಾ, ದಿನಾಂಕ: 02-05-2021ರಂದು ನುಸೈಬಾ ಅಲ್ ಮುರ್ಶಿದಾ, ದಿನಾಂಕ : 09-05-2021ರಂದು ಖಮರುನ್ನೀಸ ಅಲ್ ಮಕರ ಕಣ್ಣೂರು ತರಗತಿ ನಡೆಸಲಿದ್ದಾರೆ.

Join Whatsapp
Exit mobile version