Home ಟಾಪ್ ಸುದ್ದಿಗಳು ಚಾಕಲೇಟ್ ಗಂಟಲಲ್ಲಿ ಸಿಲುಕಿ‌ ಮಗು ಮೃತ್ಯು

ಚಾಕಲೇಟ್ ಗಂಟಲಲ್ಲಿ ಸಿಲುಕಿ‌ ಮಗು ಮೃತ್ಯು

ಮುಂಬೈ: ಚಾಕಲೇಟ್ ಗಂಟಲಲ್ಲಿ ಸಿಲುಕಿ‌ ಒಂದು ವರ್ಷದ ಮಗು ಮೃತಪಟ್ಟ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರ್ಮವೀರ್ ನಗರದಲ್ಲಿ ನಡೆದಿದೆ.


ಮೃತಪಟ್ಟಿರುವ ಮಗುವನ್ನು ಶಾರ್ವರಿ ಸುಧೀರ್ ಜಾಧವ್ (1) ಎಂದು ಗುರುತಿಸಲಾಗಿದೆ. ಜೆಲ್ಲಿ ಚಾಕೊಲೇಟ್ ನುಂಗಿ ಒದ್ದಾಡುತ್ತಿದ್ದ ಮಗು ಬಳಿಕ ಪ್ರಜ್ಞೆ ಕಳೆದುಕೊಂಡಿದೆ. ಕೂಡಲೇ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಮಗು ಮೃತಪಟ್ಟಿದೆ.

ಶಾರ್ವರಿಯನ್ನು ತಪಾಸಣೆ ನಡೆಸಿದ ಸತಾರಾ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಾಲುಂಖೆ, ಜೆಲ್ಲಿ ಚಾಕಲೇಟ್  ಮಗುವಿನ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದು, ಉಸಿರಾಡಲು ಸಾಧ್ಯವಾಗದೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version