ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ತನ್ನ ರಾಜಕೀಯ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ರಾಜಕೀಯವನ್ನು ತೊರೆಯುವುದರೊಂದಿಗೆ ತಾನು ಸಂಸದ ಸ್ಥಾನದಿಂದ ಕೆಳಗಿಳಿಯುವುದಾಗಿ ಬಾಬುಲ್ ಸುಪ್ರಿಯೋ ಶನಿವಾರ ಘೋಷಿಸಿದ್ದರು. ಆದರೆ ರಾಜೀನಾಮೆ ನೀಡದೆ ಸಂಸದನಾಗಿ ಉಳಿಯುವುದಾಗಿ ಸುಪ್ರಿಯೋ ಇಂದು ತಿಳಿಸಿದ್ದಾರೆ.
ಸುಪ್ರಿಯೋ ಪಶ್ಚಿಮ ಬಂಗಾಳದ ಅಸನ್ಸೋಲ್ ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಅಸನ್ಸೋಲ್ ಸಂಸದರಾಗಿ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸುಪ್ರಿಯೋ ಅವರು ಜುಲೈ 7 ರಂದು ಮೋದಿ ಸಂಪುಟ ಪುನರ್ರಚನೆ ಮಾಡಿದಾಗ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು.