ನಾಗ್ಪುರ: ಮೆಕ್ಕಾ ಮಾದರಿಯಲ್ಲೇ ಅಯೋಧ್ಯಾ ರಾಮಜನ್ಮಭೂಮಿಯನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (VHP) ಅಧ್ಯಕ್ಷ ರಬೀಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ. VHP ಕಾರ್ಯಕರ್ತರು ಮತ್ತು ಸಂತರನ್ನು ಉದ್ದೇಶಿಸಿ ನಾಗ್ಪುರದಲ್ಲಿ ಮಾತನಾಡಿದ ನಾರಾಯಣ್ ಸಿಂಗ್, ರಾಮ ಜನ್ಮಭೂಮಿ ಮತ್ತು ರಾಮಮಂದಿರಗಳು ಹಿಂದುತ್ವದ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ತೀರ್ಥ ಕ್ಷೇತ್ರವಾದ ಅಯೋಧ್ಯಾ ರಾಮಜನ್ಮಭೂಮಿಯನ್ನು ಕೂಡ ವ್ಯಾಟಿಕನ್ ನಗರ ಮತ್ತು ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (VHP) ಅಧ್ಯಕ್ಷ ರಬೀಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ. ಮೆಕ್ಕಾ, ಮುಸ್ಲಿಮರ ಪವಿತ್ರ ಸ್ಥಳವಾಗಿದ್ದು, ವ್ಯಾಟಿಕನ್ ನಗರವೆಂಬುದು ರೋಮನ್ ಕ್ಯಾಥೋಲಿಕ್ ಚರ್ಚ್ಗಳ ಪ್ರಧಾನ ಕಚೇರಿಯಾಗಿದೆ.