ಅಯೋಧ್ಯೆಯ ಹಿಂದೂ ಬಾಹುಳ್ಯದ ಗ್ರಾಮ ಪಂಚಾಯತ್ ಗೆ ಮುಸ್ಲಿಮ್ ಯುವಕನೀಗ ಅಧ್ಯಕ್ಷ !

Prasthutha|

ಕೋಮು ಗಲಭೆಗೆ ಹೆಸರಾಗಿರುವ ಅಯೋಧ್ಯೆಯ ರುಡವಲಿ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಹಿಂದೂ ಬಾಹುಳ್ಯವಿರುವ ಪ್ರದೇಶವಾದ ಮಾನವಿ ಬ್ಲಾಕ್ ನ ರಾಜನ್ ಪುರ ಗ್ರಾಮದಿಂದ ಓರ್ವ ಮುಸ್ಲಿಂ ಯುವಕ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಕೋಮು ಧ್ರುವೀಕರಣದ ಮೂಲಕ ಅಧಿಕಾರಕ್ಕೇರಿದ ಉತ್ತರಪ್ರದೇಶದ ಆದಿತ್ಯನಾಥ್ ಅನುಯಾಯಿಗಳಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.

- Advertisement -

ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಹಾಫೀಝ್ ಅಝೀಮುದ್ದೀನ್ ಖಾನ್ ವಿರುದ್ಧ ಆಡಳಿತಾರೂಢ ಬಿಜೆಪಿ ಜನರಿಗೆ ಹಲವು ಆಶ್ವಾಸನೆಗಳನ್ನು ನೀಡಿ ಮತ ಪಡೆಯಲು ಯತ್ನಿಸಿದರೂ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ.

ಜಾತಿ ರಾಜಕಾರಣದ ಮೂಲಕ ಅಧಿಕಾರವನ್ನು ಪಡೆಯಲು ಪ್ರಯತ್ನಿಸುವ ಬಿಜೆಪಿ ಈ ಬಾರಿ ಅಯೋಧ್ಯೆಯಲ್ಲಿ 40 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. 24 ಪಂಚಾಯತ್ ಗಳನ್ನು ಸಮಾಜವಾದಿ ಪಕ್ಷವು ತನ್ನದಾಗಿಸಿಕೊಂಡಿದೆ.

- Advertisement -

ಅಯೋಧ್ಯೆಯಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯಕ್ಕಾಗಿ ಅವಿರತ ಶ್ರಮಿಸುವುದಾಗಿ ಹೇಳಿಕೆ ನೀಡಿದ ಹಾಫಿಝ್ ಅಝೀಮುದ್ದೀನ್ ಖಾನ್ ಪಂಚಾಯತ್ ಫಂಡ್ ಅನ್ನು ಜನರ ಮೂಲಭೂತ ಅವಶ್ಯಕತೆಗಳಿಗೆ ಬಳಸುವುದಾಗಿ ತಿಳಿಸಿದ್ದಾರೆ.

Join Whatsapp