Home ಟಾಪ್ ಸುದ್ದಿಗಳು ‌ಹಿಂದೂ-ಮುಸ್ಲಿಂ ನಡುವೆ ಸಂಘರ್ಷ ಎಬ್ಬಿಸಿ ಮತ ಕಬಳಿಸುವ ಹುನ್ನಾರ ನಡೆದಿದೆ: ಆಯನೂರು ಮಂಜುನಾಥ್ ಎಚ್ಚರಿಕೆ

‌ಹಿಂದೂ-ಮುಸ್ಲಿಂ ನಡುವೆ ಸಂಘರ್ಷ ಎಬ್ಬಿಸಿ ಮತ ಕಬಳಿಸುವ ಹುನ್ನಾರ ನಡೆದಿದೆ: ಆಯನೂರು ಮಂಜುನಾಥ್ ಎಚ್ಚರಿಕೆ

ಶಿವಮೊಗ್ಗ: ಚುನಾವಣೆ ಸಂದರ್ಭವಾಗಿರುವುದರಿಂದ ಶಿವಮೊಗ್ಗದಲ್ಲಿ ಸೌಹಾರ್ದ ಕದಡುವ ಸಾಧ್ಯತೆ ಹೆಚ್ಚಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸುಳಿವು ನೀಡಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ಮಸೀದಿಗಳಿಗೆ ಅವಮಾನ ಮಾಡುವ ಮಾಡುವ ಮೂಲಕ ‌ಹಿಂದೂ ಮುಸ್ಲಿಂ ನಡುವೆ ಸಂಘರ್ಷ ಎಬ್ಬಿಸಿ ಮತ ಕಬಳಿಸುವ ಹುನ್ನಾರ ನಡೆದಿದೆ. ನಗರದ ಜನರು ಇದರಿಂದ ಜಾಗೃತರಾಗಿರಬೇಕು ಎಂದು ಕಿವಿ ಮಾತು ಹೇಳಿದರು.


ಶಿವಮೊಗ್ಗ ಶಾಂತಿಯಿಂದ ನೆಲೆಸಬೇಕೆಂದು ನಾನು ಪಣತೊಟ್ಟಿದ್ದೇನೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅನೇಕ ಧರ್ಮ ಜತೆಗೆ ಶಾಂತಿ ನೆಲೆಸುವಂತೆ ಮಾತುಕತೆ ಕೂಡ ನಡೆಸಿದ್ದೇನೆ. ಈ ಹಿಂದೆ ಪೊಲೀಸ್ ಅಧಿಕಾರಿಗಳೊಂದಿಗೂ ಮಾತಾಡಿದ್ದೇನೆ. ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದುಕೊಂಡವರು ಇಂತಹ‌ದ್ದನ್ನು ಮಾಡುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.


ಇತ್ತೀಚೆಗೆ ಜಿಲ್ಲೆಯೂ ಅಶಾಂತಿಯ‌ ಕೂಪವಾಗಿ ಪರಿಣಮಿಸಿತ್ತು. ಇದರಿಂದ ನಗರದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಅಲ್ಲದೇ ಇದು ರಾಜಕೀಯವಾಗಿಯೂ ಬಳಕೆ ಮಾಡಿಕೊಂಡಿದ್ದರು. ‌ಈಗ ಚುನಾವಣೆ ಬಿಸಿಯಲ್ಲಿರುವ ಶಿವಮೊಗ್ಗವೂ ಮತ್ತೆ ಅಂತಹುದೇ ದಾರಿ ಹಿಡಿಯುವತ್ತ ಸಾಗುವ ಪ್ರಯತ್ನದಲ್ಲಿದೆ. ಹಾಗಾಗಿ ಯಾವುದೇ ಧರ್ಮದವರು ಪ್ರಚೋದನೆಗೆ ಒಳಗಾಗದೆ ಎಲ್ಲರೂ ಇದನ್ನು ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ಅಲ್ಲದೇ ಪೊಲೀಸರು ಕೂಡ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

Join Whatsapp
Exit mobile version