Home ಕರಾವಳಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿಗೆ SDPI ವತಿಯಿಂದ ಸನ್ಮಾನ

SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿಗೆ SDPI ವತಿಯಿಂದ ಸನ್ಮಾನ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ.ಅಂಕಿತ ಬಸಪ್ಪ ಕೊನ್ನೂರು ಆವರಿಗೆ ಅವರದ್ದೇ ಹುಟ್ಟೂರಾದ ವಜರ ಮಟ್ಟಿ ಊರಿನ ನಾಗರಿಕರು ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯ ವೇದಿಕೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ವತಿಯಿಂದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ನೇತೃತ್ವದಲ್ಲಿ ಸನ್ಮಾನ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಕಾಲೇಖಾನ್, ಜಿಲ್ಲಾ ಕೋಶಾಧಿಕಾರಿ ಮುಬಾರಕ್ ಹಾಜಿಸಾಬ್, ಮುಧೋಳ ನಾಯಕರಾದ ರಾಜ ಭಕ್ಷ್, ರಿಯಾಝ್ ಕಾಲೇಖಾನ್ ಉಪಸ್ಥಿತರಿದ್ದರು.

Join Whatsapp
Exit mobile version