ಉತ್ತರ ಪ್ರದೇಶ: ಹೋಳಿ ಹಬ್ಬದ ಅತಿರೇಕ; ಬಣ್ಣದ ನೀರಿನ ಬಲೂಲ್ ಎಸೆದ ಪರಿಣಾಮ ಆಟೋ ರಿಕ್ಷಾ ಪಲ್ಟಿ!

Prasthutha|

ಲಕ್ನೋ: ಹೋಳಿ ಸಂಭ್ರಮದ ಅತಿರೇಕ ವರ್ತನೆಯೊಂದು ಆಟೋ ರಿಕ್ಷಾ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ.  ವೇಗವಾಗಿ ಚಲಿಸುತ್ತಿದ್ದ ಆಟೋವೊಂದರ ಮೇಲೆ ಯುವಕನೋರ್ವ ಬಣ್ಣದ ನೀರು ತುಂಬಿದ ಬಲೂನು ಎಸೆದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿದೆ.

ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶವೂ ವ್ಯಕ್ತವಾಗಿದೆ.
- Advertisement -

ಬಲೂನ್ ಎಸೆದು ಆಟೋ ಪಲ್ಟಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ವಿಡಿಯೋ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಆಟೋ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅನುಜ್ ಮಿಶ್ರಾ ಹೇಳಿದ್ದಾರೆ.

Join Whatsapp
Exit mobile version