ಕಾಬೂಲ್: ಕೊನೆಗೂ ನಿರೀಕ್ಷೆಯಂತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಲ್ಲಿ ತಾಲಿಬಾನ್ ಬಂಡುಕೋರರು ಯಶಸ್ವಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ
ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ತಾಲಿಬಾನ್ ಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಲಿ ಅಹ್ಮದ್ ಜಲಾಲಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ ಎನ್ನಲಾಗುತ್ತಿದೆ.
ಅಫ್ಘಾನಿಸ್ತಾನ ಹಸ್ತಾಂತರ ಸಂಬಂಧ ಕಳೆದೊಂದು ವಾರದಿಂದ ಸಂಘರ್ಷ ಆರಂಭಗೊಂಡಿತ್ತು. ಇಂದು ಬೆಳಗ್ಗೆ ರಾಜಧಾನಿ ಕಾಬೂಲ್ ವಶಪಡಿಸಿಕೊಂಡ ತಾಲಿಬಾನಿಗರು ರಕ್ತ ಹರಿಸದೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಇದೀಗ ಅಧ್ಯಕ್ಷ ಘನಿ ಅವರು ಅಧಿಕಾರ ಹಸ್ತಾಂತರ ಮಾಡುವ ಮೂಲಕ ತಾಲಿಬಾನ್ ಕೈಗೆ ಆಡಳಿತ ಸಿಕ್ಕಂತಾಗಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡಿದ್ದು ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದೆ.