Home ಟಾಪ್ ಸುದ್ದಿಗಳು ಶಿವಮೊಗ್ಗ | ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್. ನಾಗಭೂಷಣ್ ಇನ್ನಿಲ್ಲ

ಶಿವಮೊಗ್ಗ | ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್. ನಾಗಭೂಷಣ್ ಇನ್ನಿಲ್ಲ

ಶಿವಮೊಗ್ಗ | ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್. ನಾಗಭೂಷಣ್ ಇನ್ನಿಲ್ಲ ಶಿವಮೊಗ್ಗ: ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್.ನಾಗಭೂಷಣ್ ಅವರು ಬುಧವಾರ ತಡರಾತ್ರಿ ಸುಮಾರು 12.15ಕ್ಕೆ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ. 1952 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ಎಸ್.ನಾಗಭೂಷಣ್ ಅವರು, ದೆಹಲಿಯ ಆಕಾಶವಾಣಿ ಕೇಂದ್ರದಲ್ಲಿ 1975 ರಿಂದ 1981 ರವರೆಗೆ ಕನ್ನಡ ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರು ನಿಲಯದ ಸಹಾಯಕ ನಿರ್ದೇಶಕರಾಗಿ 7 ವರ್ಷ ಸೇವೆಯಲ್ಲಿದ್ದರು. ಈ ಮಧ್ಯೆ ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೆ ಇಂದಿಗೆ ಬೇಕಾದ ಗಾಂಧಿ, ಲೋ ಹಿಯಾ ಜೊತೆಯಲಿ, ರೂಪ ರೂಪಗಳನ್ನು ಧಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ವಸಿಷ್ಠರು ಮತ್ತು ವಾಲ್ಮೀಕಿಯರು, ಗಾಂಧಿ ಕಥನ ಸೇರಿದಂತೆ ಹಲವು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸದ್ಯ ಅವರು ಪತ್ನಿ ಸವಿತಾ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.ಶಿವಮೊಗ್ಗ: ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್.ನಾಗಭೂಷಣ್ ಅವರು ಬುಧವಾರ ತಡರಾತ್ರಿ ಸುಮಾರು 12.15ಕ್ಕೆ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ.

1952 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ಎಸ್.ನಾಗಭೂಷಣ್ ಅವರು, ದೆಹಲಿಯ ಆಕಾಶವಾಣಿ ಕೇಂದ್ರದಲ್ಲಿ 1975 ರಿಂದ 1981 ರವರೆಗೆ ಕನ್ನಡ ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರು ನಿಲಯದ ಸಹಾಯಕ ನಿರ್ದೇಶಕರಾಗಿ 7 ವರ್ಷ ಸೇವೆಯಲ್ಲಿದ್ದರು.

ಈ ಮಧ್ಯೆ ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದಲ್ಲದೆ ಇಂದಿಗೆ ಬೇಕಾದ ಗಾಂಧಿ, ಲೋ ಹಿಯಾ ಜೊತೆಯಲಿ, ರೂಪ ರೂಪಗಳನ್ನು ಧಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ವಸಿಷ್ಠರು ಮತ್ತು ವಾಲ್ಮೀಕಿಯರು, ಗಾಂಧಿ ಕಥನ ಸೇರಿದಂತೆ ಹಲವು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಸದ್ಯ ಅವರು ಪತ್ನಿ ಸವಿತಾ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.

Join Whatsapp
Exit mobile version