Home ಟಾಪ್ ಸುದ್ದಿಗಳು ಇನ್ನು ಮುಂದೆ ಈ ದೇಶದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಟ್ರೋಲ್ ಮಾಡುವಂತಿಲ್ಲ!

ಇನ್ನು ಮುಂದೆ ಈ ದೇಶದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಟ್ರೋಲ್ ಮಾಡುವಂತಿಲ್ಲ!

ಕ್ಯಾನ್’ಬೆರಾ: ಸಾಮಾಜಿಕ ಜಾಲತಾಣಗಳಲ್ಲಿ ಕೀಟಲೆ ಮತ್ತು ಬೆದರಿಕೆ ಹಾಕುವುದನ್ನು ತಡೆಯಲು ಆಸ್ಟ್ರೇಲಿಯಾ ಸರ್ಕಾರ ಮಹತ್ವದ ಕಾನೂನನ್ನು ಜಾರಿಗೆ ತಂದಿದ್ದು, ಟ್ರೋಲ್ ಮತ್ತು ಮೀಮ್ ಪೇಜುಗಳಿಗೆ ನಿರ್ಬಂಧ ಹೇರಲಿದೆ.


ಈ ಕುರಿತು ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, “ವಾಸ್ತವ ಪ್ರಪಂಚದಲ್ಲಿ ಪಾಲಿಸುವ ಕಾನೂನುಗಳನ್ನು ಸಾಮಾಜಿಕ ಜಾಲತಾಣದಲ್ಲೂ ಪಾಲಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕೀಟಲೆ ಅಥವಾ ಅಪಹಾಸ್ಯ ಮಾಡುವುದು ಗಂಭೀರ ಅಪರಾಧವಾಗಿದೆ. ಶೀಘ್ರದಲ್ಲೇ ಸಂಸತ್ತಿನಲ್ಲಿ ಕಾನೂನನ್ನು ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಹೊಸ ಕಾನೂನಿನ ಪ್ರಕಾರ ನೆಟ್ಟಿಗರು ಹಂಚಿಕೊಂಡ ಟ್ರೋಲ್ ಗಳು ಮತ್ತು ಅವರ ಖಾತೆಗಳಲ್ಲಿ ಪೋಸ್ಟ್ ಮಾಡಿದ ಮಾನಹಾನಿಕರ ವಿಷಯಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹೊಣೆಗಾರರಾಗಿರುತ್ತಾರೆ.

Join Whatsapp
Exit mobile version