Home ಟಾಪ್ ಸುದ್ದಿಗಳು ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾ ಪಡೆಯಿಂದ ಯುದ್ಧ ಅಪರಾಧ ನಡೆದಿರುವುದು ಸತ್ಯ | ವರದಿ ಬಿಡುಗಡೆ

ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾ ಪಡೆಯಿಂದ ಯುದ್ಧ ಅಪರಾಧ ನಡೆದಿರುವುದು ಸತ್ಯ | ವರದಿ ಬಿಡುಗಡೆ

ಕ್ಯಾನ್ ಬೆರ್ರಾ : ತನ್ನ ವಿಶೇಷ ಪಡೆಗಳು ಅಫ್ಘಾನಿಸ್ತಾನದಲ್ಲಿ ಯುದ್ಧ ಅಪರಾಧ ಎಸಗಿರುವುದನ್ನು ಕೊನೆಗೂ ಆಸ್ಟ್ರೇಲಿಯಾ ಒಪ್ಪಿಕೊಂಡಿದೆ. 39 ಅಫ್ಘಾನಿ ಪ್ರಜೆಗಳ ಕಾನೂನು ಬಾಹಿರ ಹತ್ಯೆಯ ವರದಿ ಬಿಡುಗಡೆಗೊಳಿಸಿರುವ ಆಸ್ಟ್ರೇಲಿಯಾ, ತಮ್ಮ ಯೋಧರಿಂದ ನಡೆದ ಅಪರಾಧವನ್ನು ಬಹಿರಂಗ ಪಡಿಸಿದೆ.

 2016ರಲ್ಲಿ ಆಸ್ಟ್ರೇಲಿಯಾ ವ್ಯಾಪಕ ತನಿಖೆಯೊಂದನ್ನು ನಡೆಸಿತ್ತು. ತನಿಖಾ ವರದಿಯನ್ನು ಈಗ ಬಹಿರಂಗ ಪಡಿಸಲಾಗಿದೆ. ಆಸ್ಟ್ರೇಲಿಯನ್ ವಿಶೇಷ ಪಡೆಗಳು ಕೈದಿಗಳು, ರೈತರು ಅಥವಾ ನಾಗರಿಕರನ್ನು ಕೊಂದಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಹೀಗಾಗಿ ಯಾವುದೇ ತಪ್ಪು ನಡೆದಿದ್ದರೂ ತಾವು ಅಫ್ಘಾನಿಸ್ತಾನದ ಜನರ ಕ್ಷಮೆ ಯಾಚಿಸುತ್ತೇನೆ ಎಂದು ಆಸ್ಟ್ರೇಲಿಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಆಂಗಸ್ ಕ್ಯಾಂಪೆಲ್ ಹೇಳಿದ್ದಾರೆ.

ನಾಗರಿಕರು ಮತ್ತು ಕೈದಿಗಳ ಕಾನೂನು ಬಾಹಿರ ಹತ್ಯೆಯನ್ನು ಯಾವತ್ತೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version