ಟಿ20 ಪಂದ್ಯ| ಟೀಮ್‌ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಗೆ 4 ವಿಕೆಟ್‌ ಜಯ

Prasthutha|

ಮೊಹಾಲಿ: 209 ರನ್‌ಗಳ ಕಠಿಣ ಗುರಿಯನ್ನೇ ಮುಂದಿಟ್ಟಿದ್ದರೂ, ಧೃತಿಗೆಡದ ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, 6 ವಿಕೆಟ್‌ ನಷ್ಟದಲ್ಲಿ 19. 2 ಓವರ್‌ಗಳಲ್ಲಿ 211 ರನ್‌ಗಳಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

- Advertisement -

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪ್ರಮುಖ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ ಭಾರತದ ಪಾಲಿಗೆ ವಿಲನ್‌ಗಳಾದರು. ಇವರಿಬ್ಬರು ಕೇವಲ 8 ಓವರ್‌ಗಳಲ್ಲಿ 101 ರನ್‌ ಬಿಟ್ಟುಕೊಟ್ಟು, ಒಂದೇ ಒಂದು ವಿಕೆಟ್‌ ಪಡೆಯುವಲ್ಲೂ ವಿಫಲರಾದರು.

209 ರನ್‌ಗಳ ಸವಾಲಿನ ಗುರಿ ಬೆನ್ನಟ್ಟುವ ವೇಳೆ ಆರಂಭದಲ್ಲಿಯೇ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಸ್ಪೋಟಕ ಆರಂಭ ಒದಗಿಸಿದ್ದರು.  ಆರೋನ್‌ ಫಿಂಚ್‌ (22 ರನ್‌ 13 ಎಸೆತ), ಕ್ಯಾಮರೂನ್‌ ಗ್ರೀನ್‌ (61 ರನ್‌, 30 ಎಸೆತ), ಸ್ಟೀವ್‌ ಸ್ಮಿತ್‌ 35ರನ್‌ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಕೀಪರ್‌ ಮ್ಯಾಥ್ಯೂ ವೇಡ್‌  21 ಎಸೆತಗಳಲ್ಲಿ 45 ರನ್‌ಗಳಿಸಿ ಅಜೇಯರಾಗುಳಿಯುವ ಮೂಲಕ ತಂಡವನ್ನು ಗೆಲುವಿನ ಗುರಿ ದಾಟಿಸಿದರು.   

- Advertisement -

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ

Join Whatsapp