ಮೊಹಾಲಿಯಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ 20 ಸರಣಿಯ ಮೊದಲ ಪಂದ್ಯದಲ್ಲಿ, ಆಸ್ಟ್ರೇಲಿಯಾ ಗೆಲುವಿಗೆ ಟೀಮ್ ಇಂಡಿಯಾ 209 ರನ್‌ಗಳ ಗುರಿ ನೀಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ.
ಆರಂಭಿಕ ಕೆಎಲ್ ರಾಹುಲ್ ( 55 ರನ್) ಮತ್ತು ಹಾರ್ದಿಕ್ ಪಾಂಡ್ಯ ಗಳಿಸಿದ ಅಬ್ಬರದ ಅರ್ಧಶತಕ ( 71 ರನ್* ರನ್)ಗಳ ನೆರವಿನಿಂದ ರೋಹಿತ್ ಪಡೆದ ನಿಗಧಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿದೆ.
ನಾಯಕ ರೋಹಿತ್ ಶರ್ಮಾ 11 ರನ್, ಮತ್ತು ಮೂರನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಕೇವಲ 2 ರನ್‌ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದರು.
ಪಾಂಡ್ಯಾ ಅಬ್ಬರಕ್ಕೆ ಆಸೀಸ್ ನಿರುತ್ತರ !
5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಹಾರ್ದಿಕ್ ಪಾಂಡ್ಯಾ, ಆಸ್ಟೇಲಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 30 ಎಸೆತಗಳನ್ನು ಎದುರಿಸಿದ ಪಾಂಡ್ಯಾ, 5 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನೊಂದಿಗೆ 71 ರನ್‌ಗಳಿಸಿ ಅಜೇಯರಾಗುಳಿದರು. 20ನೇ ಓವರ್‌ನ ಅಂತಿಮ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದ ಪಾಂಡ್ಯಾ, ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಏಷ್ಯಾ ಕಪ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ರಾಹುಲ್, ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದರು. 35 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನೊಂದಿಗೆ 55 ರನ್‌ಗಳಿಸಿ ಹ್ಯಾಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ನಾಥನ್ ಎಲ್ಲಿಸ್ ಮೂರು ವಿಕೆಟ್, ಹ್ಯಾಝಲ್‌ವುಡ್ 2 ಹಾಗೂ ಕ್ಯಾಮರೂನ್ ಗ್ರೀನ್ 1 ವಿಕೆಟ್ ಪಡೆದರು.