Home ಕರಾವಳಿ ನಳಿನ್ ಕಟೀಲ್ ಆಡಿಯೋ ಬಾಂಬ್| ದ.ಕ ಜಿಲ್ಲೆಯ ಶಾಸಕರಿಂದ ಕಮಿಷನರ್‌ಗೆ ದೂರು

ನಳಿನ್ ಕಟೀಲ್ ಆಡಿಯೋ ಬಾಂಬ್| ದ.ಕ ಜಿಲ್ಲೆಯ ಶಾಸಕರಿಂದ ಕಮಿಷನರ್‌ಗೆ ದೂರು

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವನ್ನು ನಕಲಿ ಆಡಿಯೋ ಎಂದು ಆರೋಪಿಸಿ ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಕಮಿಷನರ್ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ವೈರಲ್ ಆದ ಆಡಿಯೋ ನಕಲಿ ಎಂದು ಆರೋಪಿಸಿದ ಶಾಸಕರು ಸೂಕ್ತ ತನಿಖೆಗೆ ನಡೆಸಿ ಆಡಿಯೊ ವೈರಲ್ ಮಾಡಿದವರು ಮತ್ತು ನಕಲಿ ಆಡಿಯೋ ಸೃಷ್ಟಿಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Join Whatsapp
Exit mobile version