Home ಟಾಪ್ ಸುದ್ದಿಗಳು IPL 2022 ಮೆಗಾ ಹರಾಜು ವೇಳೆ ಕುಸಿದು ಬಿದ್ದ ಹರಾಜುದಾರ: ಬಿಡ್ಡಿಂಗ್ ತಾತ್ಕಾಲಿತ ಸ್ಥಗಿತ

IPL 2022 ಮೆಗಾ ಹರಾಜು ವೇಳೆ ಕುಸಿದು ಬಿದ್ದ ಹರಾಜುದಾರ: ಬಿಡ್ಡಿಂಗ್ ತಾತ್ಕಾಲಿತ ಸ್ಥಗಿತ

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಐಪಿಎಲ್ 2022 ರ ಮೆಗಾ ಹರಾಜಿನ ಹರಾಜುದಾರ ಹಗ್ ಎಡ್ಮೀಡ್ಸ್ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಹೀಗಾಗಿ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಹಗ್ ಎಡ್ಮೀಡ್ಸ್ ಶ್ರೀಲಂಕಾದ ಆಲ್‌ ರೌಂಡರ್ ಹಸರಂಗಾ ಅವರನ್ನು ಬಿಡ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದಂತೆ ನೆಲಕ್ಕೆ ಕುಸಿದುಬಿದ್ದಿದ್ದಾರೆ. ಹಗ್ ಎಡ್ಮೀಡ್ಸ್ ವಿಶ್ವದ ಪ್ರಮುಖ ಹರಾಜು ನಿರ್ವಾಹಕರಲ್ಲಿ ಒಬ್ಬರಾಗಿದ್ದು ಅವರು 2019 ರಿಂದ ಐಪಿಎಲ್ ಹರಾಜು ನಡೆಸುತ್ತಿದ್ದಾರೆ.

Join Whatsapp
Exit mobile version