Home ಟಾಪ್ ಸುದ್ದಿಗಳು ಚಿರತೆ ಚರ್ಮ ಮಾರಾಟ ಯತ್ನ; ಮೂವರ ಬಂಧನ

ಚಿರತೆ ಚರ್ಮ ಮಾರಾಟ ಯತ್ನ; ಮೂವರ ಬಂಧನ

ಚಿಕ್ಕಮಗಳೂರು:  ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಿ, ಚಿರತೆ ಚರ್ಮವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಇಂದಾವರ ಗ್ರಾಮದ ಫ್ಯಾಕ್ಟರಿ ಬಡಾವಣೆಯ ಮಲ್ನಾಡ್‌ ಸಮುದಾಯ ಭವನ ಬಳಿ ನಡೆದಿದೆ.

ಬಂಧಿತರನ್ನುಇಂದಾವರದ ಪರ್ವತ (48), ಕಾಂತರಾಜ (52), ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯ ರೈಟರ್‌ ಕಾಂತರಾಜ (52) ಹಾಗೂ ದಾವಣಗೆರೆ ಜಿಲ್ಲೆಯ ದಿಬ್ಬದಹಳ್ಳಿಯ ಕುಲುಮೆ ಕೆಲಸಗಾರ ಕೆ.ಟಿ.ಶ್ರೀನಿವಾಸ್‌ ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರಿನ ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಎಸ್‌ಐ ಎಲ್‌.ಎಂ.ಶರತ್‌, ಸಿಬ್ಬಂದಿ ಡಿ.ಎಚ್‌.ದಿನೇಶ್‌, ಎಸ್‌.ಕೆ.ದಿವಾಕರ, ಕೆ.ಎಸ್‌.ದಿಲೀಪ್‌, ಎ.ಜಿ.ಹಾಲೇಶ, ಎಚ್‌.ದೇವರಾಜ, ವೈ.ಹೇಮಾವತಿ ಕಾರ್ಯಾಚರಣೆ ತಂಡದಲ್ಲಿದ್ದರು.

Join Whatsapp
Exit mobile version