ಸರ್ಕಾರಿ ಆಟದ ಮೈದಾನ ಕಬಳಿಸಲು ಯತ್ನ; ಸ್ಥಳೀಯರಿಂದ ವ್ಯಾಪಕ ವಿರೋಧ

Prasthutha|

ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನವನ್ನು ಕಬಳಿಸಲು ಯತ್ನಿಸಿದ  ಆರೋಪದಲ್ಲಿ  ಕಾರ್ಪೋರೇಟರ್ ಪತಿ ಮತ್ತು ಸ್ಥಳೀಯರ ಮಧ್ಯೆ ಪರಸ್ಪರ ವಾಗ್ವಾದವುಂಟಾದ ಘಟನೆ ನಗರದ  ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ  ನಡೆದಿದೆ.

- Advertisement -

ಆಟದ ಮೈದಾನವಾಗಿ ಬದಲಾಗಿರುವ ಎರಡು ಎಕರೆ ಸರ್ಕಾರಿ ಜಾಗದಲ್ಲಿ ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಅವರ ಪತಿ ಏಕಾಏಕಿ ಅಕ್ರಮ ಮನೆ ನಿರ್ಮಾಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕಾಮಗಾರಿಗೆ ತಡೆಯೊಡ್ಡಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ ಬಳಿಕ ಸ್ಥಳೀಯರೊಂದಿಗೆ ಮಾತನಾಡಿದ ಕಾರ್ಪೊರೇಟರ್ ಸಂಗೀತ, ಮನೆ ನಿರ್ಮಾಣದ ವಿಷಯ ಗಮನಕ್ಕೆ ಬಂದಿರಲಿಲ್ಲ. ಇಲ್ಲಿ ಯಾವುದೇ ಮನೆ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗುವುದು. ಇದು ಆಟದ ಮೈದಾನವಾಗಿಯೇ ಉಳಿಯಲಿದೆ ಎಂದು ಭರವಸೆ ನೀಡಿದ್ದಾರೆ.

Join Whatsapp
Exit mobile version