ಕಾವೂರು: ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ನಲ್ಲಿ ಮೈಕ್ ಅಳವಡಿಸಿ ಶ್ರೀ ರಾಮ ಸೇನೆಯಿಂದ ಕೋಮು ಸಾಮರಸ್ಯ ಕದಡುವ ಯತ್ನ !

Prasthutha|

ಮಂಗಳೂರು: ರಾಜ್ಯದಲ್ಲಿ ಆಝಾನ್ ಗೆ ಎದುರಾಗಿ ಮಸೀದಿಗಳ ಎದುರು ಮೈಕ್ ಅಳವಡಿಸಿ ಶಾಂತಿ ಭಂಗ ತರುವ ಶ್ರೀರಾಮ ಸೇನೆಯ ನಾಯಕ ಮುತಾಲಿಕ್ ಕರೆಯ ಭಾಗವಾಗಿ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಕಟ್ಟಲಾಗಿರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದದಲ್ಲಿ ಇಂದು ಬೆಳಗ್ಗೆ ಮೈಕ್ ಅಳವಡಿಕೊರಗಜ್ಜನ ಭಕ್ತಿ ಗೀತೆಗಳನು ಹಾಕಲಾಗಿತ್ತು. ಇದು ಆಝಾನಿನ ಸಮಯವಾದ ಬೆಳಿಗ್ಗೆ 5:05 ನಿಮಿಷದಿಂದ ಸುಮಾರು 6:00 ಗಂಟೆಯ ವರೆಗೆ ಮುಂದುವರಿದಿತ್ತು ಎನ್ನಲಾಗಿದೆ.

- Advertisement -

ಈ ಜಾಗವು ಮೂಡುಶೆಡ್ಡೆ ಮಸೀದಿ ಯಿಂದ ಸುಮಾರು 250 ಮೀಟರ್ ದೂರದಲ್ಲಿದೆ. ಸಮಾಜದ ಶಾಂತಿ ಕದಡುವ ಈ ಕುಕೃತ್ಯದ ನೇತೃತ್ವವನ್ನು ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ವಹಿಸಿದ್ದ ಎನ್ನಲಾಗಿದ್ದು, ಅಯ್ಯಪ್ಪ ಭಕ್ತ ವೃಂದದ ಬಳಿ ಇಬ್ಬರು ಶ್ರೀ ರಾಮ ಸೇನೆಯ ಕಾರ್ಯಕರ್ತರು ಕೂಡಾ ಹಾಜರಿದ್ದರು ಎನ್ನಲಾಗಿದೆ.

Join Whatsapp
Exit mobile version