Home ಜಾಲತಾಣದಿಂದ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿದರೆ ದೇಶ ವಿಭಜನೆಯಾಗುತ್ತದೆ: ರಘುರಾಮ್ ರಾಜನ್

ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿದರೆ ದೇಶ ವಿಭಜನೆಯಾಗುತ್ತದೆ: ರಘುರಾಮ್ ರಾಜನ್

ರಾಯ್‌ಪುರ: ದೇಶದಲ್ಲಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಕ್ರಮವನ್ನು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಟೀಕಿಸಿದ್ದಾರೆ.


ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿದರೆ ದೇಶ ವಿಭಜನೆಯಾಗುತ್ತದೆ. ದೇಶವು ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತದೆಯೇ ಹೊರತು ಸರ್ವಾಧಿಕಾರದಲ್ಲಿ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ರಾಯಪುರದಲ್ಲಿ ನಡೆದ 5ನೇ ಅಖಿಲ ಭಾರತ ಪ್ರೊಫೆಷನಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
“ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯನ್ನಾಗಿ ಮಾಡುವ ಕ್ರಮವು ಈ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧ ಕಾಲದಲ್ಲಿ ನಮ್ಮನ್ನು ಹೆಚ್ಚು ದುರ್ಬಲಗೊಳಿಸಲಿದೆ. ಇದು ವಿದೇಶಿ ಹಸ್ತಕ್ಷೇಪಕ್ಕೆ ಎಡೆ ಮಾಡಿಕೊಡುವುದರಿಂದ ದೇಶವನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಇದರಿಂದ ದೇಶಕ್ಕೆ ಯಾವುದೇ ಒಳಿತಾಗಲು ಸಾಧ್ಯವಿಲ್ಲ ಎಂದರು.

Join Whatsapp
Exit mobile version