Home ಟಾಪ್ ಸುದ್ದಿಗಳು ಕೊಲೆ ಯತ್ನ ಪ್ರಕರಣ: ಲಕ್ಷದ್ವೀಪದ ಮಾಜಿ ಸಂಸದನ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ

ಕೊಲೆ ಯತ್ನ ಪ್ರಕರಣ: ಲಕ್ಷದ್ವೀಪದ ಮಾಜಿ ಸಂಸದನ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ

ಕೊಚ್ಚಿ: ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಲಕ್ಷದ್ವೀಪದ ಮಾಜಿ ಸಂಸದ ಮುಹಮ್ಮದ್ ಫೈಝಲ್ ನ ಮರಣದಂಡನೆಗೆ ಹೈಕೋರ್ಟ್ ತಡೆ ನೀಡಿದೆ.


10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಮಾಜಿ ಸಂಸದ ಮುಹಮ್ಮದ್ ಫೈಝಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಈ ತೀರ್ಪು ನೀಡಿದ್ದಾರೆ.

ಮುಹಮ್ಮದ್ ಫೈಝಲ್ ಮತ್ತು ಆತನ ಸಹೋದರ ಸೇರಿದಂತೆ ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ, ಉನ್ನತ ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗೆ ತೀರ್ಪಿನ ಅನುಷ್ಠಾನವನ್ನು ತಡೆಹಿಡಿಯಲಾಗಿದೆ.

ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಫೈಝಲ್ ಸೇರಿದಂತೆ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಹೈಕೋರ್ಟ್ ಈ ತೀರ್ಪು ನೀಡಿದೆ.

Join Whatsapp
Exit mobile version