ಮುಡಾ ಕಚೇರಿಗೆ ಮುತ್ತಿಗೆ ಯತ್ನ: ಆರ್. ಅಶೋಕ ಪೊಲೀಸ್ ವಶಕ್ಕೆ

Prasthutha|

ಮೈಸೂರು: ಮುಡಾ ಹಗರಣ ಖಂಡಿಸಿ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿಯ ನೂರಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು.

- Advertisement -

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಮುಖಂಡ ಯಶಸ್ವಿ ಸೋಮಶೇಖರ್ ಅವರನ್ನೂ ಪೊಲೀಸರು ನಗರದ ಕ್ರಾಫರ್ಡ್ ಭವನದ ಬಳಿ ವಶಕ್ಕೆ ಪಡೆದರು. ಮಹಾರಾಜ ಕಾಲೇಜು ಮೈದಾನದ ಬಳಿ ಮಳೆಯ ನಡುವೆಯೇ ಪ್ರತಿಭಟನಾಕಾರರನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದ ತಂಡವು ವಶಕ್ಕೆ ಪಡೆದು ಕರೆದೊಯ್ದಿತು.



Join Whatsapp