ಮಣಿಪಾಲ: ಎ.ಕೆ.ಎಂ.ಎಸ್ ಬಸ್ ಕಚೇರಿಗೆ ಮಾರಕಾಸ್ತ್ರಗಳೊಂದಿಗೆ ದಾಳಿಯಿಟ್ಟ ದುಷ್ಕರ್ಮಿಗಳು
Prasthutha: November 4, 2020

ಮಣಿಪಾಲ: ಬಸ್ ಮಾಲಕನ ಕಚೇರಿಗೆ ಮಾರಕಾಸ್ತ್ರಗಳೊಂದಿಗೆ ದಾಳಿಯಿಟ್ಟ ದುಷ್ಕರ್ಮಿಗಳು ಬೆದರಿಸಿ ಹೋದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮಣಿಪಾಲದ ಲಕ್ಷ್ಚೀಂದ್ರ ನಗರದಲ್ಲಿರುವ ಎ.ಕೆ.ಎಂ.ಎಸ್ ಬಸ್ ಕಚೇರಿಗೆ ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ಝಳಪಿಸಿ ಮಾಲಕ ಸೈಫುದ್ದೀನ್ ಎಂಬವರಿಗೆ ಬೆದರಿಕೆ ಹಾಕಿ ಹೋಗಿದ್ದಾರೆ.
ಕಚೇರಿಯಲ್ಲಿ ಇತರ ಏಳೆಂಟು ಮಂದಿ ಇದ್ದ ಕಾರಣ ದುಷ್ಕರ್ಮಿಗಳು ಹೆಚ್ಚಿನ ಹಾನಿಯನ್ನು ಮಾಡಿಲ್ಲ ಎನ್ನಲಾಗಿದೆ. ಬಸ್ ಮಾಲಕ ಸೈಫುದ್ದೀನ್ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಘಟನೆ ನಡೆದ ಕೂಡಲೇ ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
