ಟ್ವಿಟರ್ ನಲ್ಲೂ ಅವಕಾಶ ಇಲ್ಲ, ಸಂಸತ್ ನಲ್ಲಿ ಮಾತನಾಡೋಕೆ ಬಿಡಲ್ಲ ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ: ರಾಹುಲ್ ಗಾಂಧಿ

Prasthutha|

ದೆಹಲಿ: ಟ್ವಿಟರ್ ವಿರುದ್ಧ ಕೈ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದು, ರಾಜಕಾರಣಿಯಾಗಿ ನಾನು ಇದನ್ನು ಇಷ್ಟಪಡುವುದಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಹೇಳಿದ್ದಾರೆ.

- Advertisement -

ನಮಗೆ ಸಂಸತ್ ನಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಭರವಸೆ ಬೆಳಕಾಗಿ ಟ್ವಿಟರ್ ಇದೆ ಎಂದು ಭಾವಿಸಿದ್ದೆ. ಆದರೆ ಟ್ವಿಟರ್ ಆ ರೀತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಿಷ್ಪಕ್ಷಪಾತ, ವಸ್ತುನಿಷ್ಠ ವೇದಿಕೆಯಾಗಿ ಇಲ್ಲ. ಅದು ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ. ನಮ್ಮ ರಾಜಕೀಯವನ್ನು ನಾವೇ ನಿರ್ಧರಿಸಬೇಕೋ ಬೇರೆಯವರೋ? ಎಂದು ಭಾರತೀಯರಾಗಿ ನಾವು ಪ್ರಶ್ನೆ ಕೇಳಬೇಕು. ಬ್ಯುಸಿನೆಸ್ ನಡೆಸುವ ಕಂಪನಿಯು ನಮ್ಮ ರಾಜಕೀಯವನ್ನು ನಿರ್ಧರಿಸಲು ಯತ್ನಿಸುತ್ತಿರುವುದನ್ನು ಒಪ್ಪಲಾಗದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಟ್ವಿಟರ್ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ನಮಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಅವಕಾಶ ಕೊಡದ ಸರ್ಕಾರದ ನಡೆಗೂ ಇದಕ್ಕೂ ವ್ಯತ್ಯಾಸ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Join Whatsapp
Exit mobile version