ಝೊಮಾಟೋ ಡೆಲಿವರಿ ಬಾಯ್ ನಿಂದ ಯುವತಿ ಮೇಲೆ ಹಲ್ಲೆ । ಪ್ರಕರಣಕ್ಕೆ ಹೊಸ ತಿರುವು

Prasthutha|

ಕೆಲವು ದಿನಗಳ ಹಿಂದೆ ಹಿತೇಶಾ ಚಂದ್ರನೀ ಎಂಬವರಿಗೆ ಝೋಮಾಟೊ ಡೆಲಿವರಿ ಬಾಯ್ ಹೊಡೆದಿದ್ದಾರೆ ಎಂಬ ಹಿತೇಶಾ ಅವರ ವೀಡಿಯೋವೊಂದು ಸಾಮಾಜಿಕ ವಲಯಗಳಲ್ಲಿ ಹರಿದಾಡುತ್ತಿದ್ದು ಇದೀಗ ಆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಮೂಗಿಂದ ರಕ್ತ ಸುರಿದು ಹಿತೇಶಾ ಮಾತಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಆ ಘಟನೆಗೆ ಝೋಮಾಟೊ ತಂಡ ಹಿತೇಶಾರೊಂದಿಗೆ ಕ್ಷಮೆಯಾಚಿಸಿ ಹಲ್ಲೆ ಮಾಡಿದವನ ಪತ್ತೆ ಹಚ್ಚಿ ಪೊಲೀಸ್ ತನಿಖೆಗೆ ಒಪ್ಪಿಸುತ್ತೇವೆ ಎಂದು ಭರವಸೆ ನೀಡಿತ್ತು. ಅದರಂತೆಯೇ ಝೊಮಾಟೋ ಪ್ರತಿನಿಧಿಗಳ ಸಹಕಾರದಿಂದ ಡೆಲಿವರ್ ಬಾಯ್ ಕಾಮರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ

ಕಾಮರಾಜ್ ಅವರನ್ನು ತನಿಖೆಗೆ ಒಳಪಡಿಸಿದಾಗ ಘಟನೆ ಹೊಸ ತಿರುವನ್ನು ಪಡೆದುಕೊಂಡಿದೆ. ಕಾಮರಾಜ್ “ಟ್ರಾಫಿಕ್ ಮತ್ತು ಕೆಟ್ಟ ರಸ್ತೆಗಳ ಕಾರಣದಿಂದಾಗಿ ವಿತರಣೆಯು ವಿಳಂಬವಾಗಿದ್ದರಿಂದ ಕ್ಷಮೆಯಾಚಿಸಿ ಆಹಾರವನ್ನು ನಾನು ಹಸ್ತಾಂತರಿಸಿದ್ದೇನೆ. ಕ್ಯಾಶ್ ಆಂಡ್ ಡೆಲಿವರಿ ಪ್ರಕ್ರಿಯೆಯನ್ನು ಹಿತೇಶಾ ಅಯ್ದುಕೊಂಡಿದ್ದು, ಹಣ ಕೇಳಿದಾಗ ನನ್ನನ್ನು ಗುಲಾಮ ಎಂದು ಅವಮಾನಿಸಿ ಅವರು ಚಪ್ಪಲಿಯಲ್ಲಿ ನನಗೆ ಹೊಡೆದಿದ್ದಾರೆ “ ಎಂಬ ಹೇಳಿಕೆ ನೀಡಿದ್ದಾರೆ.

- Advertisement -

ನನ್ನೊಂದಿಗೆ ತುಂಬಾ ಅಸಹ್ಯವಾಗಿ ವರ್ತಿಸಿದ ಹಿತೇಶಾ ನನ್ನನ್ನು ಮತ್ತೆ ಮತ್ತೆ ಹೊಡೆಯಲು ಪ್ರಯತ್ನಿಸಿದಾಗ ಸ್ವ್ಯಂ ರಕ್ಷಣೆಗಾಗಿ ನಾನು ಅವರನ್ನು ತಡೆದಿದ್ದೇನೆ. ಆ ವೇಳೆ ಅವರದೇ ಉಂಗುರ ಮೂಗಿಗೆ ತಾಗಿ ರಕ್ತಸ್ರಾವವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾರೆ.

ಹಿತೇಶಾ ಚಂದ್ರನೀಯವರ ವೀಡಿಯೋ ವೈರಲ್ ಆಗಿದ್ದು ಆ ಮೂಲಕ ಝೋಮಾಟೊ ಅವರಲ್ಲಿ ಕ್ಷಮೆಯನ್ನೂ ಯಾಚಿಸಿದೆ . ಆದರೆ ಡೆಲಿವರ್ ಬಾಯ್ ಅವರ ಈ ಹೇಳಿಕೆ ಘಟನೆಗೆ ಹೊಸ ತಿರುವು ನೀಡಿದ್ದು ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

- Advertisement -