ದುಬೈ : ಜಿದ್ದಾದ ತೈಲ ಸ್ಥಾವರವೊಂದನ್ನು ತಡೆ ಹಿಡಿದಿರುವುದಾಗಿ ಯಮೆನಿನ ಹೌಥಿ ಬಂಡಾಯಕೋರರು ಘೋಷಿಸಿದ್ದಾರೆ. ಅರಾಮ್ಕೊ ತೈಲ ಸ್ಥಾವರದಲ್ಲಿ ಬೆಂಕಿ ತಗುಲಿದೆ ಎನ್ನಲಾದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸೌದಿ ಆಡಳಿತ ಮಾತ್ರ ದಾಳಿ ನಡೆದಿರುವುದನ್ನು ಒಪ್ಪಿಕೊಂಡಿಲ್ಲ.
ಸ್ಥಾವರದ ಮೇಲೆ ಬಂಡಾಯಕೋರರು ಹೊಸ ಖುದ್ಸ್ 2 ಕ್ರೂಸ್ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಹೌಥಿ ಮಿಲಿಟರಿಯ ವಕ್ತಾರ ಬ್ರಿಗೇಡ್ ಜನರಲ್ ಯೆಹಿಯಾ ಸಾರೀ ಟ್ವೀಟ್ ಮಾಡಿದ್ದಾರೆ. ಅರಾಮ್ಕೊದ ಉತ್ತರ ಜಿದ್ದಾ ಸ್ಥಾವರದ ದೃಶ್ಯಗಳನ್ನು ಹೋಲುವ ಸೆಟಲೈಟ್ ಫೋಟೊಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.