ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಆರ್.ಶಂಕರ್

Prasthutha|

ಟಿಕೆಟ್ ಕೊಡದಿದ್ದರೆ ನೂರಕ್ಕೆ ನೂರು ಪಕ್ಷೇತರನಾಗಿ ಸ್ಪರ್ಧೆ ಎಂದ ಬಿಜೆಪಿ ಎಂಎಲ್ಸಿ

- Advertisement -


ಹಾವೇರಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದರೆ ನೂರಕ್ಕೆ ನೂರು ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದ್ದಾರೆ.


ವಾಣಿಜ್ಯ ತೆರಿಗೆ ಇಲಾಖೆಯ ದಾಳಿ ಕುರಿತು ಹಾವೇರಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆಯವರು ಕಾನೂನಿನ ರೀತಿಯಲ್ಲಿ ಪರೀಕ್ಷೆ ಮಾಡಲಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಇವರು ಏಕಾಏಕಿ ದಾಳಿ ಮಾಡಿದ್ದಾರೆ. ರಾಣೆಬೆನ್ನೂರಿಗೆ ಕಾಲು ಇಟ್ಟಾಗಿನಿಂದ ದಾನ ಧರ್ಮವನ್ನು ಮಾಡಿದ್ದೇನೆ. ನಾನು ದುಡಿದ ಆದಾಯದಲ್ಲಿ ಒಂದು ಭಾಗವನ್ನು ದಾನ ಧರ್ಮಕ್ಕಾಗಿ ಮೀಸಲಿಟ್ಟಿದ್ದೇನೆ. ಇದು ಹಿಂದಿನಿಂದಲೂ ಮಾಡುತ್ತಿದ್ದೇನೆ. ಅದು ಬಿಟ್ಟು ಚುನಾವಣೆ ಇದೆ ಎಂದು ಜನರಿಗೆ ಕೊಡುತ್ತಿಲ್ಲ ಎಂದರು.

- Advertisement -


ಕೆಲವರಿಗೆ ರಾಜಕೀಯವೆಂದರೆ ಮೃಷ್ಠಾನ್ನವಾಗಿದೆ. ಆದರೆ ನನಗೆ ರಾಜಕೀಯ ಎಂಬುದು ಸೇವೆ. ಬಿಜೆಪಿ ಪಕ್ಷಕ್ಕೆ ಬಂದವರಿಗೆ ಅತಿಥಿ ಸತ್ಕಾರ ಮಾಡಿದರು. ನಮಗೆ ಉಪವಾಸ ಕೆಡವಿದರು. ಇದಕ್ಕೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.


ಇನ್ನೂ ಕಾಲ ಮಿಂಚಿಲ್ಲ. ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಿ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಚಾರ ಮಾಡಿದರು. ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿದ್ದಾರೆ ಎಂದರು.



Join Whatsapp