Home ಟಾಪ್ ಸುದ್ದಿಗಳು ನೋಯ್ಡಾ | ಮಸೀದಿಗೆ ದಾಳಿ ಮಾಡಿದ ಗುಂಪು; ಇಮಾಮ್‌, ಪ್ರಾರ್ಥನೆಗೆ ಆಗಮಿಸಿದ್ದ ವ್ಯಕ್ತಿಗೆ ಗಾಯ

ನೋಯ್ಡಾ | ಮಸೀದಿಗೆ ದಾಳಿ ಮಾಡಿದ ಗುಂಪು; ಇಮಾಮ್‌, ಪ್ರಾರ್ಥನೆಗೆ ಆಗಮಿಸಿದ್ದ ವ್ಯಕ್ತಿಗೆ ಗಾಯ

ನವದೆಹಲಿ : ಇಲ್ಲಿಗೆ ಸಮೀಪದ ಗ್ರೇಟರ್‌ ನೋಯ್ಡಾದ ರಾಮ್‌ ಪುರ ಮಜ್ರಾ ಗ್ರಾಮದ ಮಸೀದಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪು, ಮಸೀದಿಯ ಇಮಾಮ್‌ ಮತ್ತು ಸಂಜೆ ಪ್ರಾರ್ಥನೆಗೆ ಆಗಮಿಸಿದ್ದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರ ಸಂಜೆ ಈ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮ್ಮ ಸಮುದಾಯದ ಓರ್ವ ಯುವಕ ಮತ್ತು ಇನ್ನೊಂದು ಸಮುದಾಯದ ಮಹಿಳೆ ನಡುವೆ ಶುಕ್ರವಾರ ವಾಗ್ವಾದ ನಡೆದಿತ್ತು. ಮಹಿಳೆಯು ತನ್ನ ಮನೆಯಲ್ಲಿ ಈ ವಿಷಯ ತಿಳಿಸಿದ್ದಳು. ಆ ಬಳಿಕ ಆಕೆಯ ಕುಟುಂಬದ ಸದಸ್ಯರು ಮುಸ್ಲಿಂ ಪ್ರದೇಶಕ್ಕೆ ತೆರಳಿ, ನಿಮಗೆ ಪಾಠ ಕಲಿಸುತ್ತೇವೆ ಎಂದು ತೆರಳಿದ್ದರು ಎಂದು ಗಾಯಾಳುವೊಬ್ಬರ ಸಂಬಂಧಿ ರೈಸುದ್ದೀನ್‌ ಹೇಳಿದ್ದಾರೆ.

ರಾತ್ರಿ ಅವರು ದಾಳಿ ಸಂಘಟಿಸಿದ್ದು, ಇಮಾಮ್‌ ನಸೀರ್‌ ಮುಹಮ್ಮದ್‌ ಮತ್ತು ನನ್ನ ಸಂಬಂಧಿ ಫತೇಹ್‌ ಮುಹಮ್ಮದ್‌ ಅವರನ್ನು ಗಾಯಗೊಳಿಸಿದ್ದಾರೆ ಎಂದು ರೈಸುದ್ದೀನ್‌ ತಿಳಿಸಿದ್ದಾರೆ. ವಾಗ್ವಾದ ನಡೆಸಿದ್ದ ಯುವಕನಿಗೂ ದಾಳಿಯಲ್ಲಿ ಗಾಯಗೊಂಡ ಇಮಾಮ್‌ ಮತ್ತು ತನ್ನ ಸಂಬಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ರೈಸುದ್ದೀನ್‌ ತಿಳಿಸಿದ್ದಾರೆ.

Join Whatsapp
Exit mobile version